ಮಂಗಳನಿಂದ ಮಣ್ಣು ತರಲು ಬೆಂಗ್ಳೂರು ಹುಡ್ಗಿ ಬೇಕು!

Bangalore girl Anusha Mujumdar
ಬೆಂಗಳೂರು, ಜೂ.9: ಕೆಂಪು ಗ್ರಹ ಮಂಗಳದ ಅಂಗಳದ ಬಗ್ಗೆ ಅನ್ವೇಷಣಾ ಕಾರ್ಯ ಭರದಿಂದ ಸಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ತರ ಯೋಜನೆ ಸಾಕಾರಗೊಳ್ಳುವ ಬೆನ್ನಲ್ಲೇ ಯುರೋಪಿನ ತಂಡಕ್ಕೆ ಬೆಂಗಳೂರು ಮೂಲದ ವಿದ್ಯಾರ್ಥಿನಿ ಅನುಷಾ ಬೆನ್ನೆಲುಬಾಗಿ ನಿಂತಿರುವ ಸುದ್ದಿ ಬಂದಿದೆ.

ಮುಂದಿನ ಸೆಪ್ಟೆಂಬರ್‌ ತಿಂಗಳ ಹೊತ್ತಿನಲ್ಲಿ ಇಸ್ರೋ ಬಿರುಸಿನ ಚಟುವಟಿಕೆಗಳು ಆರಂಭಗೊಳ್ಳಲಿದೆ. ದ ಮಾರ್ ಆರ್ಬಿಟರ್‌ ನೌಕೆ ಮಂಗಳ ಗ್ರಹ ಪ್ರವೇಶಿಸುವ ಈ ಸಕಾಲದಲ್ಲಿ ಮಂಗಳನ ಅಂಗಳದಿಂದ ಮಣ್ಣು ಸಂಗ್ರಹ ಮಾಡುವುದು ಯುರೋಪಿನ ಬಾಹ್ಯಾಕಾಶ ಯೋಜನೆಯ ಭಾಗವಾಗಿದೆ. ಮಂಗಳ ಗ್ರಹದಿಂದ ಮಣ್ಣನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿ ಅನುಷಾ ಮಜುಂದಾರ್‌ ಕೈ ಜೋಡಿಸಿದ್ದಾರೆ.

ಬ್ರಿಟನ್‌ನ ಎಕ್ಸಿಟರ್‌(Exeter) ವಿವಿಯಲ್ಲಿ ಅನ್ವಯ ಗಣಿತ ವಿಷಯದ ಮೇಲೆ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿನಿ ಅನುಷಾ ಮಜುಂದಾರ್‌ಗೆ ಈ ಮಹತ್ವದ ಸಂಶೋಧನೆಯ ಭಾಗವಾಗುವ ಸುವರ್ಣಾವಕಾಶ ಲಭಿಸಿದೆ.ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ(ESA) ಮಂಗಳನಿಂದ ಮಣ್ಣನ್ನು ತರುವ ಯೋಜನೆಯೊಂದನ್ನು ರೂಪಿಸಿದ್ದು, 2020ಕ್ಕೆ ಇದು ಸಾಕಾರಗೊಳ್ಳಲಿದೆ.[ಮಂಗಳಯಾನ: ಚೀನಾ ಹಿಂದಿಕ್ಕಿದ ಭಾರತ]

ಅನುಷಾ ಅವರಿಗೆ ಈ ಸಾಲಿನ ಪ್ರತಿಷ್ಠಿತ ಜೋಂಟಾ ಇಂಟರ್‌ನ್ಯಾಷನಲ್‌ ಅಮೆಲಿಯಾ ಎರ್‌ಹಾರ್ಟ್‌ ಫೆಲೋಶಿಪ್‌ ಘೋಷಿಸಲಾಗಿದೆ. ವಿಶ್ವದ 35 ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುವ ಫೆಲೋಶಿಪ್‌ ಅನ್ನು ಬಾಹ್ಯಾಕಾಶ ಕುರಿತ ವಿಜ್ಞಾನದ ಸಂಶೋಧನೆಗೆ ಬಳಸಿಕೊಳ್ಳಲು ಅನುಷಾ ನಿರ್ಧರಿಸಿದ್ದಾರೆ.

ಈ ಯೋಜನೆಯಲ್ಲಿ ಭಾಗಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅನುಷಾ, 'ಬಾಹ್ಯಾಕಾಶ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತಗೊಳಿಸುವುದು ಮತ್ತು ಅದು ಸಮಾಜದ ಬಹುಭಾಗವನ್ನು ತಲುಪುವಂತೆ ಮಾಡುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇನೆ' ಎಂದಿದ್ದಾರೆ.

1938ರಿಂದ Amelia Earhart Fellowship ವಾರ್ಷಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಲ್ಲುತ್ತಿದೆ. ಸುಮಾರು 1,403 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.ಜೋಂಟಗೆ ಸುಮಾರು 64 ದೇಶಗಳ 30,000ಕ್ಕೂ ಅಧಿಕ ಕೊಡುಗೆ ಸಿಗುತ್ತದೆ. ಅನುಷಾ ಯುರೋಪಿಯನ್ ಲಾಂಚ್ ವೆಹಿಕಲ್ ಹಾಗೂ 'integrated Guidance, Navigation and Control' (iGNC) algorithms ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಬಾಹ್ಯಾಕಾಶ ನೌಕೆ ನಿಯಂತ್ರಕ ವಿನ್ಯಾಸದಲ್ಲಿ ಅನುಷಾ ನೆರವು ನೀಡುತ್ತ್ತಿದ್ದಾರೆ. [ಇಸ್ರೋ ಮಂಗಳಯಾನ ಬಗ್ಗೆ ಸಮಗ್ರ ವಿವರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+