Get Updates
Get notified of breaking news, exclusive insights, and must-see stories!

ಇನ್ನು, ನಾಲ್ಕರಿಂದ ಏಳನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ

ಕರ್ನಾಟಕದಲ್ಲಿ ಇನ್ನು 4ರಿಂದ 7ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆಗಳನ್ನು ಪಬ್ಲಿಕ್ ಪರೀಕ್ಷೆಗಳನ್ನಾಗಿಸಲು ಸರ್ಕಾರ ನಿರ್ಧಾರ. ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಕಟ

ಬೆಂಗಳೂರು, ಜುಲೈ 13: ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಇನ್ನು ಮುಂದೆ ನಾಲ್ಕರಿಂದ ಐದನೇ ತರಗತಿಯವರೆಗಿನ ಎಲ್ಲಾ ತರಗತಿಗಳ ವಾರ್ಷಿಕ ಪರೀಕ್ಷೆಗಳನ್ನು ಪಬ್ಲಿಕ್ ಪರಿಕ್ಷೆಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಶೇಠ್ ತಿಳಿಸಿದರು.

ಗುರುವಾರ, ನಗರದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಇತ್ತೀಚೆಗೆ ರಾಮನಗರದಲ್ಲಿ ಶಿಕ್ಷಕರ ಸಾಮರ್ಥ್ಯದ ಕುರಿತಂತೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಬಹುತೇಕ ಶಿಕ್ಷಕರು ಅನುತ್ತೀರ್ಣರಾಗಿದ್ದರು'' ಎಂದರು.

Annual Exams from 4th to 7th standard will be Public: Karnataka Govt

ತಮ್ಮ ಮಾತನ್ನು ಮುಂದುವರಿಸಿದ ಅವರು, ''ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 4ರಿಂದ 7ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆಗಳನ್ನು ಪಬ್ಲಿಕ್ ಪರೀಕ್ಷೆಗಳನ್ನಾಗಿಸಲು ನಿರ್ಧರಿಸಿದೆ. ಇದರಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚಲಿದ್ದು, ಗುಣಮಟ್ಟದ ಶಿಕ್ಷಣೆಗೆ ಆದ್ಯತೆ ಕಲ್ಪಿಸಲು ನೆರವಾಗುತ್ತದೆ'' ಎಂದು ಅವರು ವಿವರಿಸಿದರು.

ಈ ಪಬ್ಲಿಕ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನೂ ನೀಡಿ ಅವರಿಗೆ ಒಂದು ವರ್ಷ ಹಾಳಾಗದಂತೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

10 ಸಾವಿರ ಶಿಕ್ಷಕರ ನೇಮಕ
ಹಲವಾರು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ತನ್ವೀರ್ ಶೇಠ್ ಇದೇ ವೇಳೆ ತಿಳಿಸಿದರು. ರಾಜ್ಯ ಸರ್ಕಾರ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದೆ. ಅದರಲ್ಲಿ 6826 ಶಿಕ್ಷಕರನ್ನು ಹೈದರಾಬಾದ್ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗುವುದು. ಉಳಿದ 4600 ಶಿಕ್ಷಕರನ್ನು ಬೇರೆ ಬೇರೆ ಜಿಲ್ಲೆಗಳಿಗೆ ನೇಮಿಸಲಾಗುತ್ತದೆ ಎಂದರು.

ಗಡಿಭಾಗದ ಶಿಕ್ಷಕರಿಗೆ ಭತ್ಯೆ ನಿರ್ಧಾರ
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ''ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವಿಶೇಷ ಭತ್ಯೆ ನೀಡುವ ಕುರಿತು 6ನೇ ವೇತನ ಆಯೋಗದ ವರದಿಯ ನಂತರ ಪರಿಶೀಲನೆ ನಡೆಸಲಾಗುವುದು'' ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+