ಕೊಡಗು ಪ್ರವಾಹ: ಪರಿಹಾರಕ್ಕಾಗಿ ಮೋದಿ ಜತೆ ಚರ್ಚಿಸುವೆ ಎಂದ ಅನಂತಕುಮಾರ್

Recommended Video

      Kodagu floods: Bangalore drone start-up helps locate stranded people

      ಬೆಂಗಳೂರು, ಆಗಸ್ಟ್ 21: ಪ್ರವಾಹದಿಂದ ಕೊಡಗು ನಲುಗಿ ಹೋಗಿದೆ, ಅವರು ಸಹಜ ಸ್ಥಿತಿಗೆ ಬರಲು ವರ್ಷವೇ ಬೇಕಾದೀತು,ನೆರವಿಗೆ ನಾವು ಸದಾ ಸಿದ್ಧರಿದ್ದೇವೆ ಕೊಡಗು ಪ್ರವಾಹ ಪರಿಹಾರ ಕುರಿತು ನರೇಂದ್ರ ಮೋದಿ ಬಳಿ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದರು.

      ಕೊಡಗು ನೆರೆ ಪೀಡಿತ ಜನರ ನೆರವಿಗೆ ಧಾವಿಸಿರುವ ಬಿಜೆಪಿ ಅವಶ್ಯಕ ಸಾಮಗ್ರಿಗಳನ್ನು ಕೊಡಗು ಜಿಲ್ಲೆಗೆ ರವಾನಿಸುತ್ತಿದೆ. 15ಕ್ಕೂ ಹೆಚ್ಚು ಟ್ರಕ್ ಗಳಲ್ಲಿ ಸಾಮಗ್ರಿಗಳನ್ನು ಮಂಗಳವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಸಾಗಿಸಲಾಯಿತು. ಅನಂತಕುಮಾರ್, ಅಶೋಕ್ ಟ್ರಕ್ ಗಳಿಗೆ ನಿಶಾನೆ ತೋರಿಸಿದರು.

      ಕೊಡಗಿಗೆ ಮೂರು ಹಂತದಲ್ಲಿ ಪರಿಹಾರ ಅಗತ್ಯವಿದೆ. ಬೆಂಗಳೂರಿನ ಶಾಸಕರು ಇದೀಗ ಎರಡನೇ ಹಂತದ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ಅವರೊಂದಿಗೆ ಚರ್ಚಿಸಿ ಕೊಡಗಿಗೆ ಪರಿಹಾರ ದೊರಕಿಸಲು ಯತ್ನಿಸುವುದಾಗಿ ಅನಂತಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.

      Ananth Kumar assures will discuss with PM Modi on Kodagu relief

      ಸ್ವತಃ ಅಶೋಕ್ ಅವರು ಮಡಿಕೇರಿಗೆ ತೆರಳಿ ಸ್ಥಳೀಯ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯದಿಂದ ಅಗತ್ಯ ವಸ್ತುಗಳನ್ನು ಸಂತ್ರಸ್ತರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ, ಜೊತೆಗೆ ಅಗತ್ಯ ವಿರುವ ಕಡೆಗಳಲ್ಲಿ ಶಾಲಾ ಕಟ್ಟಡ ನಿರ್ಮಿಸಿಕೊಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿರುವುದಾಗಿ ಆರ್‌ ಅಶೋಕ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+