ರಾಹುಲ್ ಗಾಂಧಿ ಒಬ್ಬ ಖೋಟಾ ಹಿಂದುತ್ವವಾದಿ: ಹೆಗಡೆ
ಬೆಂಗಳೂರು, ಫೆಬ್ರವರಿ 15: ರಾಹುಲ್ ಗಾಂಧಿ ಒಬ್ಬ 'ಖೋಟಾ ಹಿಂದುತ್ವವಾದಿ' ಎನ್ನುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, 'ಅವರೊಬ್ಬ ನಕಲಿ ಹಿಂದುತ್ವವಾದಿ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ 60-70 ವರ್ಷಗಳಿಂದ ಜನರಿಗೆ ತಮ್ಮ ಹಿಂದು ಮೂಲದ ಕುರಿತು ಅರಿವು ಮೂಡಿಸುತ್ತಿದೆ. ಅದು ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರಿಗೆ ಈಗ ಅರ್ಥವಾಗುತ್ತಿದೆ. ನಾನು ಹಿಂದು ಎಂದು ಕೇವಲ ಹೇಳಿದರೆ ಸಾಲದು, ಅದನ್ನು ಆಚರಿಸಬೇಕು. ಇಲ್ಲವೆಂದರೆ ನಿಮ್ಮನ್ನು ಖೋಟಾ ಹಿಂದುತ್ವವಾದಿ ಎಂದೇ ಕರೆಯಬೇಕಾಗುತ್ತದೆ' ಎಂದರು.
ರಾಗಾ "ಬಾತು"
— Ananthkumar (@AnanthKumar_BJP) February 14, 2018
ಗುಂಡೂ ರಾವ್ ಮಾತು
ಕಾಂಗ್ರೆಸ್ ಮುಗಿತು #RGinKarnataka pic.twitter.com/M9UoGkwWbA
ರಾಹುಲ್ ಗಾಂಧಿ ಕರ್ನಾಟಕ ಭೇಟಿ ಕುರಿತು ನಿನ್ನೆ(ಫೆ.14) ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, "ರಾಗಾ "ಬಾತು", ಗುಂಡೂರಾವ್ ಮಾತು, ಗಾಂಗ್ರೆಸ್ ಮುಗೀತು" ಎಂದು ಪ್ರಾಸಬದ್ಧವಾಗಿ ಟ್ವೀಟ್ ಮಾಡಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು. ಒಟ್ಟಿನಲ್ಲಿ ರಾಗಾ ಭೇಟಿಯನ್ನು ಬಿಜೆಬಿ ನಾಯಕರು ಚೆನ್ನಾಗಿ ಆಡಿಕೊಳ್ಳುತ್ತಿದ್ದಾರೆ.












Click it and Unblock the Notifications