'ಹಸಿರು ರಕ್ಷಾ ಬಂಧನ' ಆಚರಿಸಿದ ಅನಂತ್ ಕುಮಾರ್

ಬೆಂಗಳೂರು, ಆಗಸ್ಟ್ 7: ರಕ್ಷಾ ಬಂಧನವನ್ನು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ವಿಶಿಷ್ಟವಾಗಿ ಆಚರಿಸಿದರು.

'ಹಸಿರು ರಕ್ಷಾ ಬಂಧನ' ಆಚರಿಸಿದ ಅನಂತ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಹಲವು ಹೆಂಗಳೆಯರು ರಾಖಿ ಕಟ್ಟಿ ಸಂಭ್ರಮಿಸಿದರು.

Anant Kumar celebrates Eco friendly Raksha Bandhan

ಈ ಸಂದರ್ಭ ಮಾತನಾಡಿದ ಸಂಸದ ಅನಂತ್ ಕುಮಾರ್, "ನಾವು ಹಲವು ವರ್ಷಗಳಿಂದ ರಕ್ಷಾ ಬಂಧನವನ್ನು ಆಚರಿಸುತ್ತಾ ಬಂದಿದ್ದೇವೆ. ರಕ್ಷಾ ಬಂಧನ ಭೂಮಿ, ಪ್ರಕೃತಿಗೆ, ಭಾರತ ಮಾತೆಗೆ ಭಾರವಾಗದಿರಲಿ; ಬದಲಿಗೆ ರಕ್ಷಣೆಯನ್ನು ನೀಡಲಿ. ನಾವೆಲ್ಲಾ ಈ ದಿನ 'ಹಸಿರು ರಕ್ಷಾ ಬಂಧನ' ಆಚರಿಸೋಣ, ಎಂದು ಹೇಳಿದರು.

Anant Kumar celebrates Eco friendly Raksha Bandhan

"ಕಳೆದ 84 ವಾರಗಳಿಂದ ನಾವು ಪ್ರತಿ ಭಾನುವಾರ ಸಸ್ಯಾಗ್ರಹದ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಾ ಬಂದಿದ್ದೇವೆ. ನಾವು ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ಮಾಡುವ, ಗಿಡಮರಗಳನ್ನು ಕಡಿಯುವುದಿಲ್ಲ ಎನ್ನುವ ಸಂಕಲ್ಪವನ್ನು ಕೈಗೊಳ್ಳೋಣ," ಎಂದು ಅನಂತ್ ಕುಮಾರ್ ಕರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+