ನಮ್ಮ ಮೆಟ್ರೋಗೆ ಹೋದ ಜಮೀನು ಭದ್ರಾ-ಕಾಳಿ ಅರಣ್ಯದಲ್ಲಿ ಸಿಕ್ತು

ಬೆಂಗಳೂರು, ಆಗಸ್ಟ್ 31: ನಮ್ಮ ಮೆಟ್ರೋಗಾಗಿ ಕಾಡುಗೋಡಿ ಡಿಪೋಗೆ ಪಡೆಯುವ ಜಾಗದ ಬದಲಾಗಿ ಭದ್ರ ಹಾಗೂ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಅರಣ್ಯ ಸಮೀಪ ಖಾಸಗಿ ಭೂಮಿ ಖರೀದಿಸಿ ಅರಣ್ಯ ಇಲಾಖೆಗೆ ನೀಡಲು ಬಿಎಂಆರ್ ಸಿಎಲ್ ತೀರ್ಮಾನಿಸಿದೆ.

ಭದ್ರಾ ಹಾಗೂ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಅಂದಾಜು 96ಎಕರೆ ಖಾಸಗಿ ಭೂಮಿ ಖರೀದಿಸಿ ಅರಣ್ಯ ಇಲಾಖೆಗೆ ನೀಡಲು ಬಿಎಂಆರ್ ಸಿಎಲ್ ತೀರ್ಮಾನಿಸಿದ್ದಯ, ಈಗಾಗಲೇ 29ಎಕರೆ ಜಾಗ ಖರೀಸಿದೆ.

ಮೆಟ್ರೋ ಎರಡನೇ ಹಂತದ ಯೋಜನೆಯ ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಮಾರ್ಗದ ಕೊನೆಯಲ್ಲಿ ಕಾಡುಗೋಡಿಯ ಅರಣ್ಯ ಪ್ರದೇಶದಲ್ಲಿ ಡಿಪೊ ನಿರ್ಮಾಣವಾಗಲಿದೆ. ಇದಕ್ಕಾಗಿ ಅರಣ್ಯ ಇಲಾಖೆಯು 47 ಎಕರೆ ಅರಣ್ಯ ಭೂಮಿಯನ್ನು ನಿಗಮಕ್ಕೆ ನೀಡಲು ತೀರ್ಮಾನಿಸಿದೆ.

Alternative land for forest department near Bhadra and Kali reserve forest

ಅರಣ್ಯ ಇಲಾಖೆಯ ನಿಯಮದಂತೆ ಅರಣ್ಯ ಭೂಮಿ ಬದಲಾಗಿ ಬೇರೆ ಪ್ರದೇಶದಲ್ಲಿ ಭೂಮಿಯನ್ನು ನೀಡಬೇಕು.ಈ ಪ್ರದೇಶವನ್ನು ಇಲಾಖೆಯು ಅರಣ್ಯವಾಗಿ ಅಭಿವೃದ್ಧಿಪಡಿಸುತ್ತದೆ, ದಾಂಡೀಲಿ ಬಳಿ 29ಎಕರೆ ಭೂಮಿಯನ್ನು ಎಕರೆಗೆ ತಲಾ 3 ಲಕ್ಷ ರೂ. ಪಾವತಿಸಿ ಖರೀದಿಸಿದೆ.

ಭದ್ರಾ ಮೀಸಲು ಅರಣ್ಯ ಬಳಿ 67 ಎಕರೆ ಜಾಗವನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ಭೂಮಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ನಂತರ ಅರಣ್ಯ ಇಲಾಖೆಯು ಕಾಡುಗೋಡಿಯಲ್ಲಿರುವ 47ಎಕರೆ ಜಾಗವನ್ನು ಬಿಎಂಆರ್ ಸಿಎಲ್ ಗೆ ನೀಡಲಿದೆ. ಮೆಟ್ರೋ ಎರಡನೇ ಹಂತದ ಯೋಜನೆಗೆ ಒಟ್ಟು 310.2 ಎಕರೆ ಭೂಮಿ ಬೇಕಿದೆ. ಒಟ್ಟು ಜಾಗದ ಪೈಕಿ 92.07ಎಕರೆ ಸರ್ಕಾರಿ ಮತ್ತು 218.20ಎಕರೆ ಖಾಸಗಿ ಜಾಗವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+