'ಸಂಘರ್ಷ'ದಿಂದ ಎಲ್ಲ ಧರ್ಮಗಳು ಹುಟ್ಟಿವೆ, 'ಸಂಸ್ಕಾರ'ದಿಂದ ಹಿಂದೂ ಧರ್ಮ ಹುಟ್ಟಿದೆ: ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 15: ಎಲ್ಲ ಧರ್ಮಗಳು ಸಂಘರ್ಷದಿಂದ ಹುಟ್ಡಿಕೊಂಡಿವೆ. ಆದರೆ, ಹಿಂದೂ ಧರ್ಮ ಮಾತ್ರ ಸಂಸ್ಕಾರದಿಂದ ಹುಟ್ಟಿಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜಿಸಿದವರು ಈಗ ಭಾರತ ಜೋಡೊ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ವಾತಂತ್ರ್ಯೋತ್ವವದ ಅಂಗವಾಗಿ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಎಲ್ಲರಿಗೂ ಬೇಕು. ಸ್ವತಂತ್ರ ಅನ್ನುವ ಪದವೇ ಬಲು ಇಷ್ಟ. ಮಕ್ಕಳು ಶಾಲೆಯ ಗುರುಗಳಿಂದ, ಅಪ್ಪ ಅಮ್ಮನಿಂದ ಸ್ವತಂತ್ರ ಪಡೆಯಲು ಬಯಸುತ್ತಾರೆ. ತೆರಿಗೆದಾರರು ಸರ್ಕಾರದಿಂದ ಸ್ವಾತಂತ್ರ್ಯ ಪಡೆಯಲು ಬಯಸುತ್ತಾರೆ. ಆದರೆ, ನಾವು ಸರ್ವ ಸ್ವತಂತ್ರ ವಾಗಿ ಬದುಕಲು ಸಾಧ್ಯವಿಲ್ಲ ಎಂದರು.

ಎಲ್ಲ ಧರ್ಮಗಳು ಸಂಘರ್ಷದಿಂದ ಹುಟ್ಡಿಕೊಂಡಿವೆ. ಆದರೆ ಹಿಂದೂ ಧರ್ಮ ಮಾತ್ರ ಸಂಸ್ಕಾರದಿಂದ ಹುಟ್ಟಿಕೊಂಡಿದೆ.
ನಮ್ಮ ಇತಿಹಾಸದಲ್ಲಿ ಅನೇಕ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ರಾಣಿ ಚೆನ್ನಮ್ಮ, ರಾಯಣ್ಣ, ಬಾಲಬಂಗಾಧರ ತಿಲಕ, ಭಗತ್ ಸಿಂಗ್, ರಾಜಗುರು, ಇವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ.
ಮನುಷ್ಯ ಸಂಘ ಜಿವಿ, ಮನೆ, ಊರು, ರಾಜ್ಯ ದೇಶ ಅಂತ ಕಟ್ಟಿಕೊಂಡಿದ್ದೇವೆ. ಎಲ್ಲರೂ ನಮ್ಮ ದೇಶದ ಮೇಲೆ ಯಾಕೆ ದಾಳಿ ಮಾಡುತ್ತಾರೆ ಎಂದರೆ, ಭಾರತ ಸಮೃದ್ಧವಾಗಿದೆ. ಹೀಗಾಗಿ ಮುಸ್ಲೀಮರು ಹಾಗೂ ಬ್ರಿಟೀಷರು 900 ವರ್ಷ ಆಳಿದರು ಎಂದು ಅವರು ಅಭಿಪ್ರಾಯ ಪಟ್ಟರು.
'ಭಾರತ ಜೋಡೊ' ಯಾತ್ರೆ ವಿಪರ್ಯಾಸ
ನೇತಾಜಿ ಸುಭಾಶ್ಚಂದ್ರ ಬೋಸ್ ಕಾಂಗ್ರೆಸ್ ನವರಾಗಿದ್ದರೂ ಪಕ್ಷ ತೊರೆದು ಹೋರಾಟ ನಡೆಸಿದರು. ಅನೇಕ ಅನಾಮಧೆಯರಿದ್ದಾರೆ. ಇತಿಹಾಸದ ಸತ್ಯವನ್ನು ಹೇಳಲು ಮುಂದೆ ಬಂದಿಲ್ಲ. ಬ್ರಿಟಿಷರು ಭಾರತವನ್ನು ವಿಭಜಿಸಿದರು, ಕಾಂಗ್ರೆಸ್ ನವರು ಅಧಿಕಾರದ ಆಸೆಗೆ ದೇಶ ವಿಭಜನೆಗೆ ಒಪ್ಪಿಕೊಂಡರು. 'ಭಾರತ ಥೊಡೊ' ಆಗಿನಿಂದಲೇ ಆರಂಭವಾಗಿದೆ. ಈಗ 'ಭಾರತ ಜೋಡೊ' ಯಾತ್ರೆ ಮಾಡುತ್ತಾರೆ ಇದು ವಿಪರ್ಯಾಸ ಎಂದು ಅವರು ಲೇವಡಿ ಮಾಡಿದರು.

ಭಾರತ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಅನೇಕ ಮಕ್ಕಳು ಅನಾಥರಾದರು. ಇಡಿ ಜಗತ್ತಿನಲ್ಲಿ ಅತ್ಯಂತ ಕರಾಳ ಇತಿಹಾಸ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಒಂದೇ ದಿನ ಸ್ವಾತಂತ್ರ್ಯ ಮತ್ತು ಒಂದೇ ದಿನ ವಿಭಜನೆ ಯಾವ ದೇಶದಲ್ಲಿಯೂ ಇಲ್ಲ.
ಇಲ್ಲಿಯವರು ವಿದೇಶಕ್ಕೆ ಹೋಗಿ ಭಾರತವನ್ನು ತೆಗಳುತ್ತಾರೆ
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ 9 ವರ್ಷಗಳಿಂದ ಸಕಾರಾತ್ಮಕ ಆಡಳಿತ ದೊರೆಯುತ್ತಿದೆ. ಕಾಶ್ಮೀರದಲ್ಲಿ 370 ರದ್ದು ಮಾಡಿದ್ದಾರೆ. ವಿಜ್ಞಾನ ತಂತ್ರಜ್ಞಾನ, ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಮೋದಿ ನಾಯಕತ್ವವನ್ನು ನಮ್ಮ ವಿರೋಧಿ ದೇಶಗಳೆ ಮೆಚ್ಚಿಕೊಳ್ಳುತ್ತಿವೆ. ಆದರೆ, ನಮ್ಮ ದೇಶದ ಕೆಲವು ನಾಯಕರು ವಿದೇಶಗಳಲ್ಲಿ ಹೋಗಿ ಭಾರತವನ್ನು ದ್ವೇಷಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತರಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಮುಸ್ಲೀಮರೇ ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಅವರ ಪರಸ್ಥಿತಿ ಏನಿದೆ ಎನ್ನುವುದನ್ನು ನೋಡಬೇಕು. ಸಮರ್ಥ ಭಾರತ ನಿರ್ಮಾಣ ಮಾಡುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಇಸ್ಲಾಂ ರಾಷ್ಟ್ರ ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಅಗತ್ಯವಿದೆ. ಅವರ ಜೊತೆಗೆ ನಾವೂ ದೇಶದ ಭವಿಷ್ಯಕ್ಕಾಗಿ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಹಾಜರಿದ್ದರು.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ












Click it and Unblock the Notifications