AirAsia: ಕರ್ನಾಟಕ ರಾಜ್ಯಪಾಲರನ್ನು ಬಿಟ್ಟು ಹಾರಿದ ವಿಮಾನ ಕೇಸ್: ಮತ್ತೆ ಇಬ್ಬರು ಸಿಬ್ಬಂದಿ ಅಮಾನತು
ಬೆಂಗಳೂರು, ಆಗಸ್ಟ್ 03: ಕರ್ನಾಟಕ ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹಾರಿದ ವಿಮಾನ ಪ್ರಕರಣದಲ್ಲಿ ಪುರುಷ ಮತ್ತು ಮಹಿಳಾ ಗ್ರೌಂಡ್ ಸಿಬ್ಬಂದಿಯನ್ನು ದೈನಂದಿನ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೆಂಪೇಗೌಡ ವಿಮಾಣ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಾಥಮಿಕ ವಿಚಾರಣೆ ನಡೆಸಿ ಏರ್ ಏಶಿಯಾ ತನ್ನ ಸ್ಟೇಷನ್ ಮ್ಯಾನೇಜರ್ ಅವರನ್ನು ಅಮಾನತುಗೊಳಿಸಿತ್ತು. ಅದರ ಬೆನ್ನಲ್ಲೆ ನಾಲ್ಕು ದಿನ ನಂತರ ತನ್ನ ಇಬ್ಬರು ಗ್ರೌಂಡ್ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಕಳೆದ ತಿಂಗಳು ಜುಲೈ 27 ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಲು ರಾಜ್ಯಪಾಲರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ (KIA) ತೆರಳಲಿದ್ದರು. ಈ ವೇಳೆ ಅಲ್ಲಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಏರ್ ಏಶಿಯಾ ವಿಮಾನವು (I5 972) ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಅವರು ತಡವಾಗಿ ಬಂದರೆಂದು ಅವರನ್ನು ಬಿಟ್ಟು ವಿಮಾನ ಹಾರಿತ್ತು. ಮಧ್ಯಾಹ್ನ 2.05ಕ್ಕೆ ವಿಮಾನ ಟೇಕ್ ಆಪ್ ಆಗಬೇಕಿತ್ತು. ರಾಜ್ಯಪಾಲರು 2.07ಕ್ಕೆ ನಿಲ್ದಾಣ ತಲುಪಿದರು ಎನ್ನಲಾಗಿದೆ.
ಏರ್‌ಲೈನ್ಸ್ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ
ಕರ್ನಾಟಕ ರಾಜ್ಯಪಾಲರಿಗಾಗಿ ಕಾಯುವಲ್ಲಿ ವಿಫಲ ಆರೋಪದ ಮೇಲೆ ತನ್ನ 30 ದಿನ ಅಮಾನತಗೊಂಡ ಸ್ಟೇಷನ್ ಮ್ಯಾನೇಜರ್ ಸೇರಿ ಪ್ರಕರಣ ವಿಚಾರವಾಗಿ ನಾಲ್ಕು ಮಂದಿ ಅಮಾನತಾಗಿದ್ದಾರೆ. ಪ್ರಕರಣ ಹೆಚ್ಚುಚರ್ಚೆಗೆ ಬರುತ್ತಿದ್ದಂತೆ ಸಾಮಜಿಕ ಜಾಲತಾಣಗಳಲ್ಲಿ ಏರ್ ಏಶಿಯಾ ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಏರ್‌ಲೈನ್ಸ್ ಪರವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಿದ್ದರೂ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಘಟನೆ ಬಳಿಕ ಒಂದು ಗಂಟೆ ತಡವಾಗಿ ರಾಜ್ಯಪಾಲ್ಯರು ಹೈದರಾಬಾದ್‌ಗೆ ತೆರಳಿದ್ದಾರೆ. ಗವರ್ನರ್ ತಂಡವು ಏರ್‌ಲೈನ್ಸ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿದೆ. ಏರ್‌ಏಷಿಯಾ ಗ್ರೌಂಡ್ ಸ್ಟಾಫ್‌ನ ತಪ್ಪಿನಿಂದಾಗಿ ರಾಜ್ಯಪಾಲರಿಗೆ ವಿಮಾನ ತಪ್ಪಿದೆ ಎಂದು ಆರೋಪಿಸಿದರು. ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ಏರ್‌ಪೋರ್ಟ್ ತಲುಪಿದ್ದಾರೆ ಎಂದು ರಾಜಭವನ ಸಮರ್ಥಿಸಿಕೊಂಡಿದೆ.

ರಾಜ್ಯಪಾಲರ ಬ್ಯಾಗ್ ನೋಡದ ಮೇಲೂ ಲೋಪ
ಏರ್ ಏಶಿಯಾದ ಬೆಂಗಳೂರು ವಿಮಾನ ನಿಲ್ದಾಣದ ವ್ಯವಸ್ಥಾಪಕರಾದ ಜಿಕೊ ಸೊರೆಸ್ ಅವರು ವಿಶೇಷ ವ್ಯಕ್ತಿಗಳಿಗಾಗಿ (VIP) ಕಾಯದ ಆರೋಪದ ಮೇರೆಗೆ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಹೈದರಾಬಾದ್ ವಿಮಾನ ಸಮಯಕ್ಕೆ ಸರಿಯಾಗಿ ಟೇಕಾಫ್ ಆಗಿದೆ. ಆದರೆ ಸಿಬ್ಬಂದಿಗೆ ರಾಜ್ಯಪಾಲರ ಬ್ಯಾಗ್‌ಗಳು ಮೊದಲೇ ಬಂದಿದ್ದರು ಆ ಬಗ್ಗೆ ಅರಿಯದೇ, ಸ್ವಲ್ಪ ಕಾಲ ಕಾಯದೇ ಲೋಪವೆಸಗಿದ್ದಾರೆ ಎಂದು ತಿಳಿದು ಬಂದಿದೆ.
ಏರ್ ಏಶಿಯಾ ಹಿರಿಯ ಅಧಿಕಾರಿಗಳ ತಂಡವೊಂದು ಕಳೆದ ಸೋಮವಾರ ಜುಲೈ 31ರಂದು ರಾಜ್ಯಪಾಲರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಘಟನೆಯ ಬಗ್ಗೆ ಕ್ಷಮೆ ಕೋರಿದರು. ಅಷ್ಟರಲ್ಲಾಗಲೇ ಸ್ಟೇಷನ್ ಮ್ಯಾನೇಜರ್‌ನ ಅಮಾನತು ಆಗಿದ್ದರು.
ನಿಮಗಾದ ತೊಂದರೆಗೆ ಕ್ಷಮೆ ಕೋರುತ್ತಾರೆ. ಅಂದು ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಅವರು ರಾಜ್ಯಪಾಲರಿಗೆ ತಿಳಿಸಿದರು ಎಂದು ರಾಜಭವನದ ಅಧಿಕಾರಿ ಹೇಳಿದರು.












Click it and Unblock the Notifications