ರಾಜ್ಯದಲ್ಲಿರುವ ಮತ್ತೊಂದು ಫೈವ್ ಸ್ಟಾರ್ ಜೈಲು ಯಾವುದು ಗೊತ್ತಾ?
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ. ಕನ್ನಡ ಸುದ್ದಿ ವಾಹಿಯೊಂದರ ವರದಿ. ಹಿಂಡಲಗಾ ಜೈಲಿನಲ್ಲಿ ಕೈದಿಗಳಿಗೆ ಐಶಾರಾಮಿ ಜೀವನದ ಬಗ್ಗೆ ವರದಿ.
ಬೆಂಗಳೂರು, ಜುಲೈ 17: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು, ವಿಐಪಿ ಕೈದಿಗಳಿಗೆ ಸ್ವರ್ಗ ಎಂಬ ಸುದ್ದಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ರಾಜ್ಯದ ಮತ್ತೊಂದು ಜೈಲು, ಅಲ್ಲಿನ ಪ್ರಮುಖ ಕೈದಿಗಳಿಗೆ ಫೈವ್ ಸ್ಟಾರ್ ಲೈಫ್ ಸ್ಟೈಲ್ ನೀಡಿರುವ ಆಪಾದನೆ ಹೊತ್ತಿದೆ.
ಮಾಧ್ಯಮವೊಂದು ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಸ್ವತಂತ್ರ್ಯ ಚಳುವಳಿಯ ಇತಿಹಾಸ ಹೊಂದಿರುವ ಹಿಂಡಲಗಾ ಜೈಲು ಈ ಹೊಸ ಕುಖ್ಯಾತಿಗೆ ಪಾತ್ರವಾಗಿದೆ.

ಪರಪ್ಪನ ಅಗ್ರಹಾರದಲ್ಲಿದ್ದಂತೆಯೇ, ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ, ಮದ್ಯ, ಇಸ್ಪೀಟು ಸರಬರಾಜು ಆಗುವ ಜತೆಗೆ, ಅಲ್ಲಿ ಕೈದಿಗಳ ಹುಟ್ಟುಹಬ್ಬಗಳ ಕಾರ್ಯಕ್ರಮ ನಡೆಸಲಾಗುತ್ತದೆ.
ಕೈದಿಗಳ ಚೇಲಾಗಳು ತಮ್ಮ ನೆಚ್ಚಿನ ನಾಯಕ ಅಥವಾ ಮಿತ್ರರಿಗಾಗಿ ದೊಡ್ಡ ದೊಡ್ಡ ಕೇಕ್ ಗಳನ್ನು ತಂದು ಕತ್ತರಿಸಿ ಪರಸ್ಪರ ತಿನ್ನಿಸಿ ಪಾರ್ಟಿ ಮಾಡುತ್ತಾರೆ.
ಅಲ್ಲಿನ ಬಹುತೇಕ ಕೈದಿಗಳ ಬಳಿ ಸ್ಮಾರ್ಟ್ ಫೋನ್ ಗಳಿವೆ. ಅಲ್ಲಿ ಎಲ್ಲಾ ಸೌಕರ್ಯ, ಸವಲತ್ತುಗಳೂ ಸುಲಲಿತವಾಗಿ ಕೈದಿಗಳನ್ನು ಸೇರುತ್ತವೆ. ಜೈಲು ಅಧಿಕಾರಿಗಳೇ ಕೈದಿಗಳಿಗೆ ರಾಜ ಮರ್ಯಾದೆ ಕೊಡುತ್ತಾರೆ ಎಂದು ವಾಹಿನಿಯು ಕೆಲವಾರು ಛಾಯಾಚಿತ್ರಗಳ ಸಹಿತ ವರದಿಯನ್ನು ಮಾಡಿದೆ.












Click it and Unblock the Notifications