Aero India 2023; ಬೆಂಗಳೂರು ಏರ್‌ಪೋರ್ಟ್‌ಗೆ ಹೋಗಲು ರೈಲುಗಳು, ಪಟ್ಟಿ
ಏರೋ ಇಂಡಿಯಾ 2023ರ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ಜನರು ಬೆಂಗಳೂರು ನಗರದಿಂದ ಸುಲಭವಾಗಿ ರೈಲಿನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಬೆಂಗಳೂರು, ಫೆಬ್ರವರಿ 12; ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023ಕ್ಕೆ ಸೋಮವಾರ ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಫೆಬ್ರವರಿ 13 ರಿಂದ 17ರ ತನಕ ಈ ಬಾರಿಯ ಏರ್ ಶೋ ನಡೆಯಲಿದೆ,
ಏರೋ ಇಂಡಿಯಾ 2023ರ ಹಿನ್ನಲೆಯಲ್ಲಿ ಬೆಂಗಳೂರು ನಗರದಿಂದ ಯಲಹಂಕದ ಕಡೆ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಇದರಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಯಾಣಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕುವುದು ಖಚಿತವಾಗಿದೆ. ಇದರಿಂದಾಗಿ ವಿಮಾನ ತಪ್ಪಿ ಹೋಗುವ ಭೀತಿಯೂ ಇದೆ.
ಬೆಂಗಳೂರು ಸಂಚಾರಿ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹಲವು ಮಾರ್ಗಗಳ ಬದಲಾವಣೆ ಮಾಡಿದ್ದಾರೆ. ಆದರೆ ಶುಕ್ರವಾರದಿಂದಲೇ ಯಲಹಂಕ ಬಳಿಕ ಕಿಲೋಮೀಟರ್‌ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು.
ಬೆಂಗಳೂರು ನಗರದಿಂದ ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕದೆ ಜನರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಪುಪಬಹುದು. ಅದಕ್ಕಾಗಿ ಸಬ್ ಅರ್ಬನ್ ರೈಲುಗಳನ್ನು ಬಳಕೆ ಮಾಡಬಹುದಾಗಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೈಲು ಓಡಿಸುತ್ತಿದೆ. ಆದರೆ ಮೊದಲಿನಿಂದಲೂ ಇದಕ್ಕೆ ಪ್ರಯಾಣಿಕರ ಸಂಖ್ಯೆಯ ಕೊರತೆ ಇದೆ.
ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರೈಲುಗಳು ಮತ್ತು ವಿಮಾನ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ರೈಲುಗಳ ಪಟ್ಟಿ ಇಲ್ಲಿದೆ. ಏರ್ ಶೋ ಮುಗಿಯುವ ತನಕ ರೈಲನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜನರು ವಿಮಾನ ನಿಲ್ದಾಣ, ನಗರದ ನಡುವೆ ಸಂಚಾರ ನಡೆಸಬಹುದಾಗಿದೆ.

ಬೆಂಗಳೂರು-ಕೆಐಎ ರೈಲುಗಳು
* ರೈಲು ನಂಬರ್ 06531 ಕೆಎಸ್ಆರ್ ಬೆಂಗಳೂರು ಸಿಟಿ-ದೇವನಹಳ್ಳಿ ಮೆಮು (ಕೆಎಸ್ಆರ್ ಬೆಂಗಳೂರು ಹೊರಡುವುದು ಬೆಳಗ್ಗೆ 4.55, ಕೆಐಎ ಹಾಲ್ಟ್ ಸ್ಟೇಷನ್ ತಲುಪುವ ಸಮಯ 6.10)
* ರೈಲು ನಂಬರ್ 06534 ಯಲಹಂಕ-ಕೆಐಎ ಮೆಮು (ಯಲಹಂಕದಿಂದ 7.45ಕ್ಕೆ ಹೊರಟು, 8.05ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ)
* ರೈಲು ನಂಬರ್ 06378 ಕೆಎಸ್ಆರ್ ಬೆಂಗಳೂರು-ಕೋಲಾರ ಡೆಮು (ಕೆಎಸ್ಆರ್‌ನಿಂದ ಬೆಳಗ್ಗೆ 8.35ಕ್ಕೆ ನಿರ್ಗಮನ, ಕೆಐಎ ಹಾಲ್ಟ್ ಸ್ಟೇಷನ್ 9.48ಕ್ಕೆ ತಲುಪುತ್ತದೆ)

ಕೆಐಎ ಹಾಲ್ಟ್ ಸ್ಟೇಷನ್‌ಗೆ ರೈಲುಗಳು
* ರೈಲು ಸಂಖ್ಯೆ 06536 ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು (ಕಂಟೋನ್ಮೆಟ್‌ನಿಂದ 12.20ಕ್ಕೆ ನಿರ್ಗಮನ, ಕೆಐಎ ಹಾಲ್ಟ್ ಸ್ಟೇಷನ್ 1.20ಕ್ಕೆ ತಲುಪಲಿದೆ)
* ರೈಲು ಸಂಖ್ಯೆ 06538 ಕಂಟೋನ್ಮೆಂಟ್-ದೇವನಹಳ್ಳಿ ಮೆಮು (ಕಂಟೋನ್ಮೆಂಟ್‌ನಿಂದ 4 ಗಂಟೆಗೆ ಹೊರಟು, 4.55ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ)
* ರೈಲು ಸಂಖ್ಯೆ 16549 ಕೆಎಸ್‌ಆರ್ ಬೆಂಗಳೂರು-ಕೋಲಾರ ಡೆಮು (ಕೆಎಸ್‌ಆರ್‌ನಿಂದ ಸಂಜೆ 6.10ಕ್ಕೆ ಹೊರಡಲಿದೆ, 7.07ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ)
* ರೈಲು ಸಂಖ್ಯೆ 06540 ಯಲಹಂಕ-ದೇವನಹಳ್ಳಿ ಮೆಮು (ಯಲಹಂಕದಿಂದ ಸಂಜೆ 7.15ಕ್ಕೆ ಹೊರಟು ಕೆಐಎ ಹಾಲ್ಟ್ ಸ್ಟೇಷನ್‌ಗೆ 7.35ಕ್ಕೆ ತಲುಪಲಿದೆ)

ಕೆಐಎ-ಬೆಂಗಳೂರು ರೈಲುಗಳು ವಿವರ
* ರೈಲು ಸಂಖ್ಯೆ 06532 ದೇವನಹಳ್ಳಿ-ಕೆಎಸ್ಆರ್ ಮೆಮು (ಕೆಐಎನಿಂದ ಸಂಜೆ 7.58ಕ್ಕೆ ಹೊರಟು, 9.20ಕ್ಕೆ ಕೆಎಸ್ಆರ್ ಬೆಂಗಳೂರು ತಲುಪಲಿದೆ)
* ರೈಲು ಸಂಖ್ಯೆ 06533 ದೇವನಹಳ್ಳಿ-ಯಲಹಂಕ ಮೆಮು (ಕೆಐಎನಿಂದ ಬೆಳಗ್ಗೆ 6.39ಕ್ಕೆ ಹೊರಟು ಯಲಹಂಕವನ್ನು 7 ಗಂಟೆಗೆ ತಲುಪಲಿದೆ)
* ರೈಲು ಸಂಖ್ಯೆ 16550 ಕೋಲಾರ-ಕೆಎಸ್ಆರ್ ಬೆಂಗಳೂರು (ಕೆಐಎನಿಂದ ಬೆಳಗ್ಗೆ 8.21ಕ್ಕೆ ಹೊರಟು, 9.35ಕ್ಕೆ ಬೆಂಗಳೂರು ತಲುಪಲಿದೆ)
* ರೈಲು ಸಂಖ್ಯೆ 06535 ದೇವನಹಳ್ಳಿ-ಕಂಟೋನ್ಮೆಂಟ್ ಮೆಮು (ಕೆಐಎನಿಂದ ಬೆಳಗ್ಗೆ 8.57ಕ್ಕೆ ನಿರ್ಗಮನ, 10.40ಕ್ಕೆ ಕಂಟೋನ್ಮೆಂಟ್‌ಗೆ ಆಗಮನ)

ಬೆಂಗಳೂರು ನಗರಕ್ಕೆ ಬರಲು ರೈಲುಗಳು
* ರೈಲು ಸಂಖ್ಯೆ 06388 ಕೋಲಾರ-ಕಂಟೋನ್ಮೆಂಟ್ ಡೆಮು (ಕೆಐಎನಿಂದ ಸಂಜೆ 4.08ಕ್ಕೆ ಹೊರಟು ಕಂಟೋನ್ಮೆಂಟ್‌ಗೆ 5.40ಕ್ಕೆ ಆಗಮಿಸಲಿದೆ)
* ರೈಲು ಸಂಖ್ಯೆ 06539 ದೇವನಹಳ್ಳಿ-ಯಲಹಂಕ ಮೆಮು (ಕೆಐಎನಿಂದ ಸಂಜೆ 6 ಗಂಟೆಗೆ ಹೊರಟು ಯಲಹಂಕಕ್ಕೆ 6.20ಕ್ಕೆ ಆಗಮಿಸಲಿದೆ)
* ರೈಲು ಸಂಖ್ಯೆ 06532 ದೇವನಹಳ್ಳಿ-ಕೆಎಸ್ಆರ್ ಬೆಂಗಳೂರು (ಕೆಐಎನಿಂದ ಸಂಜೆ 7.58ಕ್ಕೆ ಹೊರಟು ಕೆಎಸ್ಆರ್ ಬೆಂಗಳೂರು 9.20ಕ್ಕೆ ತಲುಪಲಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ












Click it and Unblock the Notifications