Get Updates
Get notified of breaking news, exclusive insights, and must-see stories!

ಶಾಸಕ ಸತೀಶ್ ರೆಡ್ಡಿ ಪರ ನಾಳೆ ಮತ್ತೆ ನಟ ದರ್ಶನ್ ಪ್ರಚಾರ!

ಬೆಂಗಳೂರು: ಚುನಾವಣೆಗೆ ಕ್ಷಣಗಣನೆ ಶುರುವಾದಂತೆ ಅಭ್ಯರ್ಥಿಗಳ ಪ್ರಚಾರ ಬೇಟೆ ಚುರುಕಾಗುತ್ತಿದೆ. 4 ದಿನದಲ್ಲಿ 224 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಈ ಪೈಕಿ ಹೈವೋಲ್ಟೇಜ್ ಕ್ಷೇತ್ರ ಎಂಬ ಬಿರುದು ಪಡೆದ ಬೊಮ್ಮನಹಳ್ಳಿಯಲ್ಲಿ ಮತ್ತೊಮ್ಮೆ ನಟ ದರ್ಶನ್ ಎಂಟ್ರಿಯಾಗುತ್ತಿದೆ. ಶಾಸಕ ಸತೀಶ್ ರೆಡ್ಡಿ ಪರ ನಾಳೆ ಮತ್ತೆ ನಟ ದರ್ಶನ್ ಪ್ರಚಾರ ನಡೆಸಲಿದ್ದಾರೆ.

1 ವಾರದ ಹಿಂದಷ್ಟೇ ಬಂದು ಶಾಸಕ ಸತೀಶ್ ರೆಡ್ಡಿ ಪರವಾಗಿ ನಟ ದರ್ಶನ್ ಪ್ರಚಾರ ನಡೆಸಿದ್ದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕಡೆ ರೋಡ್ ಶೋ ನಡೆಸಿದ್ದರು ನಟ ದರ್ಶನ್. ಅಲ್ಲದೆ ಬೊಮ್ಮನಹಳ್ಳಿಯ ಬಿಳೆಕಹಳ್ಳಿಯಿಂದ ಬೈಕ್ ರ‍್ಯಾಲಿ ನಡೆಸಿ ಪುಟ್ಟೇನಹಳ್ಳಿ ಸತ್ಯ ಗಣಪತಿಯ ದೇವಾಲಯ ಬಳಿ ಬೃಹತ್‌ ಬಹಿರಂಗ ಸಭೆ ನಡೆಸಿ ಕ್ಯಾಂಪೇನ್ ಮಾಡಲಾಗಿತ್ತು. ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ ನೌಕರರು ಹೆಚ್ಚಾಗಿರುವ ಕಡೆ ಪ್ರಚಾರ ನಡೆಸಿದ್ದರು, ಇದೀಗ ಮತ್ತೊಂದು ರೌಂಡ್ ಶಾಸಕ ಸತೀಶ್ ರೆಡ್ಡಿ ಪರವಾಗಿ ನಟ ದರ್ಶನ್ ಅಖಾಡಕ್ಕೆ ಇಳಿಯುತ್ತಿದ್ದಾರೆ.

Actor Darshan will do election campaign in Bommanahalli constituency once again

ಬೊಮ್ಮನಹಳ್ಳಿಯಲ್ಲಿ 'ಡಿ-ಬಾಸ್' ಪ್ರಚಾರ!

ನಾಳೆ ನಡೆಯಲಿರುವ ಪ್ರಚಾರ ಸಭೆಯಲ್ಲಿ ನಟ ದರ್ಶನ್ ಬೊಮ್ಮನಹಳ್ಳಿಯ ವಿವಿಧೆಡೆ ರೋಡ್ ಶೋ ನಡೆಸಲಿದ್ದಾರೆ. ಹುಳಿಮಾವು ಮೂಲಕ ಆರಂಭವಾಗುವ ರೋಡ್ ಶೋ, ಹುಳಿಮಾವು, ಅರಕೆರೆ, ದೇವರಚಿಕ್ಕನಹಳ್ಳಿ, ಹೊಂಗಸಂದ್ರ, ಭಗತ್ ಸಿಂಗ್ ರಸ್ತೆ, MSR ಲೇಔಟ್, ವಿರಾಟನಗರ, ರೂಪೇನ ಅಗ್ರಹಾರ, ಮಂಗಮ್ಮನಪಾಳ್ಯ, ಗಾರ್ವೇಭಾವಿಪಾಳ್ಯ, ಬಂಡೆಪಾಳ್ಯ, ಹೊಸಪಾಳ್ಯ ಮಾರ್ಗವಾಗಿ ರೋಡ್ ಶೋ ಸಾಗಿ ಅಗರ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಬಳಿ ಅಂತ್ಯವಾಗಲಿದೆ.

4ನೇ ಬಾರಿಗೆ ಗೆಲ್ಲುವ ಪ್ರಯತ್ನ

ಬೊಮ್ಮನಹಳ್ಳಿ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಿ ನಿಂತಿದೆ. ಕಳೆದ 3 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತತ ಗೆಲುವು ಕಾಣುತ್ತಾ ಶಾಸಕರಾಗಿರುವ ಸತೀಶ್ ರೆಡ್ಡಿ 4ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಈ ಚುನಾವಣೆ ಸಾಕಷ್ಟು ಗಮನ ಸೆಳೆದಿದ್ದು, ನಟ ದರ್ಶನ್ ಕೂಡ ಸತೀಶ್ ರೆಡ್ಡಿ ಪರ ಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವಾರ ಬೊಮ್ಮನಹಳ್ಳಿಗೆ ಬಂದಿದ್ದ ದರ್ಶನ್ ಅವರನ್ನ ನೋಡಲು ಬೊಮ್ಮನಹಳ್ಳಿ-ಬೇಗೂರು ರಸ್ತೆಯಲ್ಲಿ ನಟ ದರ್ಶನ್ ಫ್ಯಾನ್ಸ್ ಭಾರಿ ಸಂಖ್ಯೆಯಲ್ಲಿ ಸೇರಿ ನೆಚ್ಚಿನ ನಟನನ್ನ ಬರಮಾಡಿಕೊಂಡಿದ್ದರು.

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಿಡಿತ

2008ರಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆಯಿತು. ಅಂದಿನಿಂದ ಇಂದಿನ ತನಕ ಈ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಗೆಲುವಿಗಾಗಿ ಹೋರಾಟ ಆರಂಭಿಸಿದೆ. ಈ ನಡುವೆ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಶಾಸಕ ಸತೀಶ್ ರೆಡ್ಡಿ ಪರ ಪ್ರಚಾರ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಮತದಾನಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ ಭರ್ಜರಿ ಕ್ಯಾಂಪೇನ್ ಶುರು ಮಾಡಿದ್ದಾರೆ. 1 ವಾರದ ಅಂತರದಲ್ಲಿ ಎರಡೆರಡು ಬಾರಿ ನಟ ದರ್ಶನ್ ಬೊಮ್ಮನಹಳ್ಳಿಗೆ ಎಂಟ್ರಿ ಆಗುತ್ತಿರುವುದು ವಿಶೇಷ.

Actor Darshan will do election campaign in Bommanahalli constituency once again

ಮತ್ತಷ್ಟು ಸಿನಿ ತಾರೆಯರ ಎಂಟ್ರಿ?

2018ರ ವಿಧಾನಸಭೆ ಚುನಾವಣೆಯಲ್ಲೂ ಶಾಸಕ ಸತೀಶ್ ರೆಡ್ಡಿ ಪರ ಕನ್ನಡ ಚಿತ್ರರಂಗದ ಹಲವು ತಾರೆಯರು ಪ್ರಚಾರ ನಡೆಸಿದ್ದರು. ಈ ಬಾರಿ ಪ್ರಮುಖ ಆಕರ್ಷಣೆ ನಟ ದರ್ಶನ್. ನಾಳೆ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಭಾರಿ ಜನರು ಸೇರುವ ನಿರೀಕ್ಷೆ ಜೊತೆಗೆ ಪಕ್ಕಾ ಪ್ಲ್ಯಾನ್ ಮಾಡಿ ಪ್ರಚಾರ ಕೈಗೊಳ್ಳಲಾಗಿದೆ. ಹೀಗಾಗಿ ನಟ ದರ್ಶನ್ ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಕೂಡ ಇದೆ.

ಒಟ್ನಲ್ಲಿ ಬಿಜೆಪಿ ಮತ್ತೊಮ್ಮೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಕ್ಷೇತ್ರ ಕೂಡ ಒಂದಾಗಿದ್ದು, ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಉತ್ತರ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+