Pavithra Gowda: 'ಎಲ್ಲವೂ ಸರಿ ಹೋಗುತ್ತದೆ': ಜೈಲಿನಲ್ಲೇ ಪವಿತ್ರಾ ಗೌಡಗೆ ದರ್ಶನ್ ಸಮಾಧಾನ?
ಬೆಂಗಳೂರು, ಜುಲೈ 01: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಇಬ್ಬರೂ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡ ನಿನ್ನೆ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದು, ದರ್ಶನ್ ಹಾಗೂ ಇತರ ಆರೋಪಿಗಳಿಗೆ ಪ್ರತಿದಿನ ಜೈಲಿನ ಆಸ್ಪತ್ರೆಯಲ್ಲಿ ಇನ್ಸೂಲಿನ್ ಕೊಡಿಸಲಾಗುತ್ತದೆಯಂತೆ.

ಹೀಗೆ ನಿನ್ನೆಯೂ ಜೈಲಿನ ಆಸ್ಪತ್ರೆಯಲ್ಲಿ ದರ್ಶನ್‌ಗೆ ಇನ್ಸೂಲಿನ್ ಕೊಡಿಸುವ ವೇಳೆ ಪವಿತ್ರಾ ಗೌಡ ಆಗಮಿಸಿದ್ದು, ಇಬ್ಬರು ಪರಸ್ಪರ ಭೇಟಿಯಾಗಿದ್ದಾರಂತೆ. ಅಲ್ಲದೇ ಜೈಲಿನ ಆಸ್ಪತ್ರೆಯಲ್ಲಿಯೇ ದರ್ಶನ್ ಮತ್ತು ಪವಿತ್ರಾ ಗೌಡ ಕೆಲ ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯ ಕಸ್ಟಡಿ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಪವಿತ್ರಾ ಗೌಡ ಮೊದಲು ಜೈಲು ಸೇರಿದಿದ್ದು, ಬಳಿಕ ಎರಡು ದಿನಗಳ ನಂತರ ದರ್ಶನ್‌ಗೆ ಜೈಲಾಗಿತ್ತು. ಬಂಧನ, ವಿಚಾರಣೆ, ಜೈಲುವಾಸ ಈ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದರುವ ಎ1 ಮತ್ತು ಎ2 ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ನಿನ್ನೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಎಲ್ಲಾ ಸರಿ ಹೋಗುತ್ತದೆ ಎಂದು ದರ್ಶನ್, ಪವಿತ್ರಾ ಗೌಡಗೆ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಮೊದಮೊದಲು ಯಾರೊಂದಿಗೂ ಮಾತನಾಡದೇ ಬೇಸರದಿಂದ ಇರುತ್ತಿದ್ದು, ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಭೇಟಿ ಬಳಿಕ ಕೊಂಚ ರಿಲಾಕ್ಸ್ ಆಗಿದ್ದರಂತೆ. ಈಗೀಗ ಜೈಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ದರ್ಶನ್, ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ದರ್ಶನ್ ಟಿವಿ ಹಾಗೂ ಕೇರಂ ಬೋರ್ಡ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications