Get Updates
Get notified of breaking news, exclusive insights, and must-see stories!

ಬೆಂಗಳೂರು ಜೈಲಲ್ಲೂ ಲವ್ ಸ್ಟೋರಿ, ಇದು TikTok ತೆರೆದಿಟ್ಟ ಸೀಕ್ರೆಟ್!

ಬೆಂಗಳೂರು, ಜನವರಿ.29: ಪ್ರೀತಿಗೆ ಯಾವುದೇ ಬಾರ್ಡರ್ ಇಲ್ಲ ನಿಜ. ಹಾಗಂತಾ ಜೈಲಿನಲ್ಲೂ ಲವ್ ಸ್ಟೋರಿ ಇದೆಯಾ ಎಂದು ಎಂಥವರಿಗೂ ಆಶ್ಚರ್ಯ ಪಡುತ್ತಾರೆ. ಇದು ಆಶ್ಚರ್ಯಕರ ಸಂಗತಿಯಾದರೂ ನಿಜ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ಇರುವ ಆರೋಪಿಯ ಲವ್ ಸ್ಟೋರಿಯನ್ನು ಟಿಕ್ ಟಾಕ್ ವಿಡಿಯೋ ಬಟಾಬಯಲು ಮಾಡಿದೆ.

Recommended Video

      ಪರಪ್ಪನ ಅಗ್ರಹಾರ ಜೈಲಿನಲ್ಲಿ ಸರಣಿ ಸಾವು | Prappana Agrahara | Jail | Death Row |Oneindia kannada

      ಟಿಕ್ ಟಾಕ್ ಮಾಡುವುದು ಅಂದ್ರೆ ಈಗಿನ ಯುವಕ-ಯುವತಿಯರಿಗೆ ಒಂಥರಾ ಕ್ರೇಜ್. ನಿಂತಲ್ಲಿ-ಕುಂತಲ್ಲಿ ಎಲ್ಲೆಂದರಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿಯೇ ಬಿಡ್ತಾರೆ. ಅದೇ ರೀತಿ ಜೈಲಿನಲ್ಲೇ ಕುಳಿತು ಟಿಕ್ ಟಾಕ್ ವಿಡಿಯೋ ಮಾಡಿದ ಆರೋಪಿ ಹುಚ್ಚಾಟ ತೋರಿದ್ದಾನೆ.

      ಬೆಂಗಳೂರಿನ ಪರಪ್ಪನ ಅಗ್ರಹಾರ ಕೈದಿಗಳ ಪಾಲಿಗೆ ಸ್ವರ್ಗವಾಗುತ್ತಿದೆಯಾ ಅನ್ನೋ ಅನುಮಾನ ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಜೈಲಿನಲ್ಲೇ ಕೈದಿಗಳಿಗೆ ಎಲ್ಲ ಬಗೆ ಸೌಕರ್ಯ ಒದಗಿಸಿಕೊಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಜೈಲಿನಲ್ಲಿರುವ ಕೈದಿ ಹಾಯಾಗಿ ಟಿಕ್ ಟಾಕ್ ಮಾಡಿದ್ದು, ಜೈಲಿನ ಭದ್ರತೆಯನ್ನೇ ಪ್ರಶ್ನೆ ಮಾಡುವಂತಾಗಿದೆ.

      ಗುಂಡೇಟು ತಿಂದೋನಿಗೆ ಭಂಡ ಗುಂಡಿಗೆ!

      ಗುಂಡೇಟು ತಿಂದೋನಿಗೆ ಭಂಡ ಗುಂಡಿಗೆ!

      ಕೆಟ್ಟ ಮೇಲೆ ಮನುಷ್ಯನಿಗೆ ಬುದ್ಧಿ ಬರುತ್ತೆ ಅಂತಾರೆ. ಆದರೆ ಪೊಲೀಸರಿಂದ ಗುಂಡೇಟು ತಿಂದ ಮೇಲೆಯೂ ಬೆಂಗಳೂರಿನ ರೌಡಿ ಫಯಾಜ್ ಅಲಿಯಾಸ್ ಚಪ್ಪರ್ ಗೆ ಬುದ್ಧಿ ಬಂದಿರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬದಲಿಗೆ ಪರಪ್ಪನ ಅಗ್ರಹಾರವನ್ನೇ ಅತ್ತೆ ಮನೆ ಮಾಡಿಕೊಂಡು ಹಾಯಾಗಿ ಎಂಜಾಯ್ ಮಾಡುತ್ತಿರುವ ಹಾಗೆ ಕಾಣುತ್ತಿದೆ.

      ಚಪ್ಪರ್ ಹೇಳಿದ 'ತೇರಿ ಮೇರಿ ಕಹಾನಿ'

      ಚಪ್ಪರ್ ಹೇಳಿದ 'ತೇರಿ ಮೇರಿ ಕಹಾನಿ'

      ಜೈಲಿನಲ್ಲೂ ಫಯಾಸ್ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿದ್ದಾನೆ. ಜೊತೆಗಿದ್ದ ಹುಡುಗರ ಜೊತೆ ಲವ್ ಸ್ಟೋರಿ ಶೇರ್ ಮಾಡಿಕೊಂಡ ರೌಡಿ, ತೇರಿ ಮೇರಿ ಕಹಾನಿ ಹಿಂದಿ ಹಾಡಿಗೆ ಹುಡುಗಿಯ ಜೊತೆಗೆ ತನ್ನ ಫೋಟೋ ಅಪ್ ಲೋಡ್ ಮಾಡಿದ್ದಾನೆ. ಅಲ್ಲದೇ ತನ್ನ ಪ್ರೇಯಸಿಯ ಫೋಟೋ ಹಾಕಿ ಬಿಂದಾಸ್ ಆಗಿ ಟಿಕ್ ಟಾಕ್ ವಿಡಿಯೋ ಮಾಡಿದ್ದಾನೆ.

      ಪರಪ್ಪನ ಅಗ್ರಹಾರದಲ್ಲಿ ವಸೀಂ ದರ್ಪ

      ಪರಪ್ಪನ ಅಗ್ರಹಾರದಲ್ಲಿ ವಸೀಂ ದರ್ಪ

      ಫಯಾಜ್ ಲವ್ ಸ್ಟೋರಿಯ ಟಿಕ್ ಟಾಕ್ ಮಾಡುತ್ತಿದ್ದರೆ, ಅವನ ಜೊತೆಯಲ್ಲೇ ಪರಪ್ಪನ ಅಗ್ರಹಾರ ಸೇರಿದ ಮತ್ತೊಬ್ಬ ಆರೋಪಿ ವಸೀಂ ಟಿಕ್ ಟಾಕ್ ನಲ್ಲೂ ಗಾಂಜಾಲಿ ತೋರಿದ್ದಾನೆ. ನಟ ಶಿವರಾಜ್ ಕುಮಾರ್ ಡೈಲಾಗ್ ಗೆ ಚಾಕು-ಚೂರಿ ಹಿಡಿದು ಫೋಸ್ ಕೊಟ್ಟಿರುವ ವಿಡಿಯೋ ಮಾಡಿದ್ದು, ಜೈಲಿನಲ್ಲೂ ಹುಚ್ಚಾಟ ಮುಂದುವರಿಸಿದ್ದಾನೆ.

      ಪರಪ್ಪನ ಅಗ್ರಹಾರ ಇಷ್ಟೊಂದು ಮಜಬೂತಾ?

      ಪರಪ್ಪನ ಅಗ್ರಹಾರ ಇಷ್ಟೊಂದು ಮಜಬೂತಾ?

      ಇನ್ನು, ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪರ ಅಗ್ರಹಾರದಲ್ಲೇ ಕೈದಿಗಳು ಇಷ್ಟೊಂದು ಹಾಯಾಗಿ ಇದ್ದಾರೆ ಎಂದರೆ ಜೈಲಿನ ಸುರಕ್ಷತೆಯ ಬಗ್ಗೆಯೇ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಮನಃಪರಿವರ್ತನೆ ಆಗಲಿ ಎಂದು ಜೈಲಿಗೆ ಕಳುಹಿಸಿದರೆ, ಅಲ್ಲಿಯೂ ತಮ್ಮ ಹುಚ್ಚಾಟ ತೋರುವ ಇಂಥವರಿಗೆ ಪೊಲೀಸರು ಅದ್ಯಾವ ರೀತಿ ಪಾಠ ಮಾಡುತ್ತಾರೋ ಏನೋ ಕಾದುನೋಡಬೇಕಷ್ಟೇ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+