ಸಿಎಂ ಆಪ್ತ ಬಿಬಿಎಂಪಿ ಸದಸ್ಯ ಜಿ. ಕೃಷ್ಣಮೂರ್ತಿ ಎಸಿಬಿ ಬಲೆಗೆ
ಬೆಂಗಳೂರು, ಮಾರ್ಚ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಫ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜಾಜಿನಗರ ಬಿಬಿಎಂಪಿ ಸದಸ್ಯ ಜಿ. ಕೃಷ್ಣಮೂರ್ತಿ ಅವರು ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರದಳ ಅಧಿಕಾರಿಗಳು ಬಂಧಿಸಿದ್ದಾರೆ.
ಕೃಷ್ಣಮೂರ್ತಿ ಅವರು ಕಾಮಗಾರಿಯೊಂದರ ಹಣ ಮಂಜೂರು ಮಾಡಲು 30 ಲಕ್ಷ ರು. ಲಂಚ ನೀಡುವಂತೆ ಗುತ್ತಿಗೆದಾರನ ಬಳಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶುಕ್ರವಾರ 15 ಲಕ್ಷ ರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ಬಿಬಿಎಂಪಿ ಸಹಾಯಕ ಇಂಜಿನಿಯರ್ ಅವರನ್ನು ಬಂಧಿಸಿದ್ದಾರೆ. ಗಿರೀಶ್ ನೇತೃತ್ವದ ತಂಡ ದಾಳಿ ಮಾಡಿದೆ.












Click it and Unblock the Notifications