ಎಬಿವಿಪಿ ಕಾರ್ಯಕರ್ತರ ಮೇಲೆ ಎನ್‌ಎಸ್‌ಯುಐ ದಾಳಿ
ಬೆಂಗಳೂರು, ಜನವರಿ, 21: ಬೆಂಗಳೂರಿನ ಆರ್ ಎಸ್ ಎಸ್ ಕಚೇರಿ ಮೇಲೆ ಗುರುವಾರ ಎನ್ ಎಸ್ ಯುಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯಾದವಸ್ಮೃತಿ ಕಚೇರಿ ಮೇಲೆ 40 ಜನರ ತಂಡ ದಾಳಿ ಮಾಡಿದೆ.
ಮೊದಲು ಕಚೇರಿಗೆ ಮುತ್ತಿಗೆ ಹಾಕಿದ್ದ ತಂಡ ಕೆಲ ಸಮಯದ ನಂತರ ಹಿಂದಕ್ಕೆ ಬಂದು ಕಚೇರಿಯ ಮೇಲೆ ಕಲ್ಲು ಎಸೆದಿದೆ. ಅಲ್ಲದೇ ಎಬಿವಿಪಿ ಕಾರ್ಯಕರ್ತರ ಮೇಲೆಯೂ ಹಲ್ಲೆ ಮಾಡಿದೆ.[ಪಂಜಾಬ್ ಆರ್ ಎಸ್ ಎಸ್ ಕಚೇರಿ ಮೇಲೆ ಉಗ್ರರು ದಾಳಿ ಮಾಡಿದ್ದರು]
ಎಬಿವಿಪಿ ಕಾರ್ಯಕರ್ತ ಬಸವೇಶ್ ಎಂಬುವರಿಗೆ ಗಂಭೀರ ಗಾಯಗಳಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಎಬಿವಿಪಿ ತಿಳಿಸಿದೆ.[ಹೊಸ ವರ್ಷದಲ್ಲಿ ಆರ್ ಎಸ್ ಎಸ್ ಹೊಸ ಪ್ರಯೋಗ]
ಈ ಬಗ್ಗೆ ಹೇಳಿಕೆ ನೀಡಿರುವ ಎಬಿವಿಪಿಯ ಲವೀನ್ ಕೊಟ್ಯಾನ್, ಘಟನೆಯನ್ನು ನಾವು ಖಂಡಿಸುತ್ತೇವೆ. ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.














Click it and Unblock the Notifications