ಅಭಿನಂದನ್ ಅಲೆ! ವಿಂಗ್ ಕಮಾಂಡರ್ ಮೀಸೆಗೆ ಡಿಮ್ಯಾಂಡೋ ಡಿಮ್ಯಾಂಡು!
Recommended Video

ಬೆಂಗಳೂರು, ಮಾರ್ಚ್ 05: ಭಾರತದಾದ್ಯಂತ ಇದೀಗ ಅಭಿನಂದನ್ ಜ್ವರ ಆರಂಭವಾಗಿದೆ! ಪಾಕಿಸ್ತಾನಿ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಿ, ಪಾಕ್ ಸೇನೆಯ ವಶಕ್ಕೆ ಸಿಕ್ಕರೂ, ರಾಜಬೀದಿಯಿಂದಲೇ ಭಾರತಕ್ಕೆ ವಾಪಸ್ಸಾದ ಹೀರೋ, ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆಗೆ ಈಗ ಎಲ್ಲಿಲ್ಲದ ಬೇಡಿಕೆ!
ಹೌದು, ಯಾವ ಸೆಲೂನ್ ಗೆ ಹೋದರೂ ಟ್ರೆಂಡಿಂಗ್ ಫ್ಯಾಶನ್ ನ ಪಟ್ಟಿಯಲ್ಲಿ ಅಭಿನಂದನ್ ಸ್ಟೈಲ್ ಅಗ್ರಸ್ಥಾನದಲ್ಲಿ ಕಾಣಿಸುತ್ತಿದೆ. ಕೆನ್ನೆ ಮೇಲೆಲ್ಲ ವ್ಯಾಪಿಸುವಂತೆ ಮೀಸೆ ಬಿಟ್ಟ ಅಭಿನಂದನ್ ಅವರ ಸ್ಟೈಲ್ ಅನ್ನು ಇದೀಗ ಭಾರತದ ನೂರಾರು ಯುವಕರು ಅನುಕರಿಸುತ್ತಿದ್ದಾರೆ.
ಬೆಂಗಳೂರಿನ ಸೆಲೂನ್ ವೊಂದರಲ್ಲಿ ಹೇರ್ ಡಿಸೈನರ್ ವೊಬ್ಬರು 650 ಕ್ಕೂ ಹೆಚ್ಚು ಜನರಿಗೆ ಅಭಿನಂದನ್ ರೀತಿಯಲ್ಲೇ, ಮೀಸೆ ಮತ್ತು ಹೇರ್ ಕಟ್ ಮಾಡಿಸಿದ್ದಾರೆ. ಅದೂ ಉಚಿತವಾಗಿ!
ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಉಗ್ರದಾಳಿಯ ನಂತರ ಭಾರತ ಪಾಕಿಸ್ತಾನದ ಉಗ್ರ ನೆಲೆಯ ಮೇಲೆ ಫೆ.26 ರಂದು ದಾಳಿ ನಡೆಸಿತ್ತು. ಆ ನಂತರ ಉಭಯ ದೇಶಗಳ ನಡುವೆ ಯುದ್ಧದ ಸನ್ನಿವೇಶ ಏರ್ಪಟ್ಟಿತ್ತು.
ಈ ಸಂದರ್ಭದಲ್ಲಿ ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.
ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಭಾರತದಿಂದ ಸಾಕಷ್ಟು ಒತ್ತಡ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾರ್ಚ್ 1 ರಂದು ಪಾಕಿಸ್ತಾನ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
| Array |
ಮಂಗಳೂರಲ್ಲೂ ಅಭಿನಂದನ್ ಅಲೆ!
ಮಂಗಳೂರಿನ ಗೋಕುಲ್ ದಾಸ್ ಪ್ರಭು ಎಂಬುವವರು ಅಭಿನಂದನ್ ಕಟ್ ಮಾಡಿಸಿಕೊಂಡು ಫೋಟೋಕ್ಕೆ ಪೋಸು ನೀಡಿದ್ದು ಹೀಗೆ!
|
ಅಭಿನಂದನ್ ಸ್ಫೂರ್ತಿ
ಅಭಿನಂದನ್ ಅವರಿಂದ ಸ್ಫೂರ್ತಿ ಪಡೆದು ನಾನು ಈ ಸ್ಟೈಲ್ ಅನುಕರಿಸುತ್ತಿದ್ದೇನೆ ಎಂದಿದ್ದಾರೆ ಆದಿತ್ಯ ಸ್ವಾಮಿನಾಥನ್.
|
ಒಬ್ಬರೇ, ಇಬ್ಬರೇ?
ವಿಂಗ್ ಕಮಾಂಡರ್ ವೇಶದಲ್ಲಿ ಕಾಣಿಸಿಕೊಳ್ಳುತ್ತಿರುವವರು ಒಬ್ಬರೇ, ಇಬ್ಬರೇ? ಅಭಿನಂದನ್ ವೇಶದಲ್ಲಿರುವ ಹಲವರ ಚಿತ್ರವನ್ನು ಸಾಂತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
|
ಲೇಟೆಸ್ಟ್ ಫ್ಯಾಶನ್
ಸೆಲೂನೊಂದರಲ್ಲಿ ವ್ಯಕ್ತಿಯೊಬ್ಬರು ಅಭಿನಂದನ್ ಕಟ್ ಮಾಡಿಸಿಕೊಳ್ಳುತ್ತಿರುವ ಚಿತ್ರವನ್ನು 'ಲೇಟೆಸ್ಟ್ ಫ್ಯಾಶನ್ ಟ್ರೆಂಡ್' ಎಂಡು ಎಂಬ ಕ್ಯಾಪ್ಶನ್ ನೊಂದಿಗೆ ಶಾಲಿನಿ ಜಾಮ್ವಾಲ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications