ಬೆಂಗಳೂರಲ್ಲಿ ಭಾನುವಾರ ಕೇಜ್ರಿವಾಲ್ ಸಾರ್ವಜನಿಕ ಸಭೆ

ಬೆಂಗಳೂರು, ಜ. 10: ನವದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಧಿ ಸಂಗ್ರಹಿಸಲು ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ಜ. 11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬೆಂಗಳೂರಿನ ಕಾಕ್ಸ್ ಟೌನ್‌ನಲ್ಲಿರುವ ಸೇಂಟ್ ಅಲೋಶಿಯಸ್ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಗೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು "ನವದೆಹಲಿ ಚುನಾವಣೆ - ಭಾರತದಲ್ಲಿ ಪರ್ಯಾಯ ರಾಜಕೀಯಕ್ಕೆ ಅವಕಾಶಗಳು ಮತ್ತು ಸಾಧ್ಯತೆಗಳು" ವಿಷಯದ ಕುರಿತು ಮಾತನಾಡಲಿದ್ದಾರೆ. [ಜ. 11ರಂದು ಅರವಿಂದ ಕೇಜ್ರಿವಾಲ್ ಜೊತೆ ಭೋಜನ]

arvind

ಪ್ರಾಮಾಣಿಕ ಪಕ್ಷಕ್ಕೆ ನಿಧಿ ಕೊಡಿ : 'ನಾನು ಪ್ರಾಮಾಣಿಕ ಪಕ್ಷಕ್ಕೆ ನಿಧಿ ಕೊಡ್ತೇನೆ' ಎಂಬ ಟ್ಯಾಗ್ ಲೈನ್ ಅಡಿ ಆಮ್ ಆದ್ಮಿ ಪಕ್ಷ ನಿಧಿ ಸಂಗ್ರಹ ಕಾರ್ಯ ಆರಂಭಿಸಿದೆ. "ಸ್ವಚ್ಛ ರಾಜನೀತಿ ಇಲ್ಲದೆ ಸ್ವಚ್ಛ ಭಾರತ ಸಾಧ್ಯವೇ?, ಸ್ವಚ್ಛ ಹಣವಿಲ್ಲದೆ ಸ್ವಚ್ಛ ರಾಜನೀತಿ ಸಾಧ್ಯವೇ?, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯಕ್ಕಾಗಿ ಇಂದು ದೇಣಿಗೆ ನೀಡಿ!!, ಚಿಕ್ಕ ದೇಣಿಗೆಯೂ ಒಂದು ದೊಡ್ಡ ಬೆಂಬಲವಾಗಿದೆ..." ಎಂದು ಆಪ್ ಹೇಳಿಕೆ ನೀಡಿದೆ. [ನವದೆಹಲಿಗೆ 24 ಗಂಟೆ ವಿದ್ಯುತ್]

ಆಮ್ ಆದ್ಮಿ ಪಕ್ಷದ ಸ್ವಯಂಸೇವಕನಾಗಿ ಅಥವಾ ಬೆಂಬಲಿಗನಾಗಿ ಹೆಸರು ನೋಂದಾಯಿಸಲು [email protected] ಮೇಲ್ ಮಾಡಬೇಕು ಎಂದು ಪಕ್ಷ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+