ಬಿಬಿಎಂಪಿ ಚುನಾವಣಾ ಪ್ರಚಾರ ಸಮಿತಿ ಘೋಷಿಸಿದ ಎಎಪಿ
ಬೆಂಗಳೂರು ಆಗಸ್ಟ್ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಯಾವ ಕ್ಷಣದಲ್ಲಾದರೂ ಘೋಷಣೆಯಾಗಬಹುದು. ಈ ಹಿನ್ನೆಲೆ ಆಮ್ ಆದ್ಮಿ ಪಕ್ಷ (ಎಎಪಿ) 'ಬಿಬಿಎಂಪಿ ಚುನಾವಣಾ ಪ್ರಚಾರ ಸಮಿತಿ' ರಚಿಸಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಸಮಿತಿಯಲ್ಲಿ ಬೆಂಗಳೂರು ಬಲ್ಲವರನ್ನು ಆಯ್ಕೆ ಮಾಡಿ ಸ್ಥಾನ ನೀಡಲಾಗಿದೆ. ಸಮಿತಿ ಅಧ್ಯಕ್ಷರಾಗಿ ಭಾಸ್ಕರ್ ರಾವ್, ಇನ್ನಿತರ ಸದಸ್ಯರಾಗಿ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಎಎಪಿ ಮುಖಂಡರಾದ ಕೆ.ಮಥಾಯಿ, ಮೋಹನ್ ದಾಸರಿ, ಲಕ್ಷ್ಮಿಕಾಂತ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರೆಲ್ಲರು ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಎಎಪಿ ಗೆಲ್ಲಿಸಿ ಬೆಂಗಳೂರಿನಲ್ಲಿ ಒಂದು ಜನಪರ ಮತ್ತು ಪ್ರಾಮಾಣಿಕ ಪಾಲಿಕೆ ಸ್ಥಾಪಿಸಲಿದ್ದಾರೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಬಿಬಿಎಂಪಿ ಚುನಾವಣೆ ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಎಸಗಿರುವ ಬಿಜೆಪಿ ವಿರುದ್ಧ ಎಎಪಿ ನೇತೃತ್ವದಲ್ಲಿ ಜನಸಾಮಾನ್ಯರು ಅಭ್ಯರ್ಥಿಗಳಾಗಿ ನಿಲ್ಲಲಿದ್ದಾರೆ. ಪಕ್ಷ ಸ್ಥಾಪನೆಯ ಹತ್ತೇ ವರ್ಷದಲ್ಲಿ ದೇಶದೆಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಲ್ಲದೇ, ಎರಡು ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆ ಮಾಡಿದೆ.
ಎಎಪಿ ಪಕ್ಷವು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ನಾವು ಕೆಲಸ ಮಾಡುತ್ತಿರುವುದರಿಂದ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೇವೆ.! ದೇಶದ ಜನರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾದರಿ ಆಡಳಿತ ಗುರುತಿಸಿದ್ದಾರೆ ಎಂದು ವಿವರಿಸಿದರು.

ಮೂಲಸೌಕರ್ಯಗಳು ಜನರ ಹಕ್ಕು
ಎಎಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಬಿಎಂಪಿ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, "ಜನರು ಪಾವತಿಸುವ ತೆರಿಗೆ ದುಡ್ಡು ಜನರ ಉದ್ಧಾರಕ್ಕೆ ಬಳಸಬೇಕೇ ಹೊರತು ರಾಜಕಾರಣಿಗಳ ಏಳಿಗೆಗೆ ಅಲ್ಲ ಎಂಬುದನ್ನು ನಾವು ನಂಬಿದ್ದೇವೆ. ಸುಸಜ್ಜಿತ ಶಾಲೆಗಳು, ಆಸ್ಪತ್ರೆಗಳು, ಉತ್ತಮ ರಸ್ತೆ, ನೀರು, ವಿದ್ಯುತ್ ಮತ್ತು ಬೆಳವಣಿಗೆಗೆ ಪೂರಕವಾದ ಅವಕಾಶಗಳು ಜನರಿಗೆ ಇಷ್ಟೇ ಬೇಕಾಗಿದೆ. ಅವು ಜನರ ಹಕ್ಕೂ ಸಹ ಆಗಿದೆ. ಅವುಗಳನ್ನು ಸರ್ಕಾರಕ್ಕೆ ಸಮರ್ಪಕವಾಗಿ ಕೊಡಲು ಆಗುತ್ತಿಲ್ಲ. ಆದರೆ ಎಎಪಿ ಹೇಳಿಕೆಗೆ ಸಿಮೀತವಾಗಿಲ್ಲ. ನುಡಿದಂತೆ ನಡೆಯಲಿದೆ," ಎಂದರು.

ಪಾಲಿಕೆ ಚುನಾವಣೆ ಸ್ಪರ್ಧೆ 600ಜನರ ಆಸಕ್ತಿ
ಎಎಪಿ ಕಳೆದ ವಾರ 'ಅಭ್ಯರ್ಥಿ ಶೋಧನಾ ಸಮಿತಿ' ರಚಿಸಿದೆ. ಮಿಸ್ ಕಾಲ್ ಮತ್ತು ಈಮೇಲ್ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆ ಕಲ್ಪಿಸಿದ್ದೆವು. ಅದರಡಿ ಈವರೆಗೆ 600ಕ್ಕೂ ಹೆಚ್ಚು ಜನರು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಎಎಪಿ ಟಿಕೆಟ್ ನಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ವಾರ್ಡ್ ಮೀಸಲಾತಿ ಪ್ರಕಟಣೆಗೂ ಮುನ್ನವೇ ಇಷ್ಟು ಆಸಕ್ತರು ಬಂದಿರುವುದು, ಮೀಸಲಾತಿ ಘೋಷಣೆಯ ನಂತರ ಇನ್ನಷ್ಟು ಆಸಕ್ತರು ಬರುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಕಾನೂನು ಸುವ್ಯವಸ್ಥೆ ವಿರುದ್ಧ ಜನರ ಆಕ್ರೋಶ
ಜನಸಂಪರ್ಕ ಮತ್ತು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚುಂದ್ರು ಮಾತನಾಡಿ ಜನರು ಒಂದೆಡೆ 40ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಬೇಸತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶಗೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಪರ್ಯಾಯ ರಾಜಕಾರಣ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಉಳಿದಿಲ್ಲ. ಜನರೇ ಹೇಳುವಂತೆ ಈ ಭ್ರಷ್ಟ ಬಿಜೆಪಿ ಯನ್ನು ಪ್ರಶ್ನಿಸಿ ಬಯಲಿಗೆಳೆಯುವ ನೈತಿಕ ಶಕ್ತಿ ಎಎಪಿಗೆ ಮಾತ್ರ ಇದೆ ಎಂದು ಹೇಳಿದರು.

ಸಚಿವ ಅಶ್ವತ್ಥ ವಿರುದ್ಧ ಲೋಕಾಯುಕ್ತ ದೂರು
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ ನಾರಾಯಣ್ ಅವರ ಟೆಂಡರ್ ಹಗರಣದ ಬಗ್ಗೆ ಸಾಕ್ಷಿ ಸಮೇತ ಮಾತನಾಡಿದ್ದೆವು. ಆದರೆ ಆ ಬಗ್ಗೆ ಯಾವುದೇ ತನಿಖೆ ಆರಂಭವಾಗಲಿಲ್ಲ. ಈ ಕಾರಣಕ್ಕೆ ಶೀಘ್ರವೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇವೆ ಎಂದು ಎಎಪಿ ರಾಜ್ಯ ವಕ್ತಾರ ಕೆ.ಮಥಾಯಿ ಹೇಳಿದರು.

ಕಾರ್ಯಕರ್ತರೊಂದಿಗೆ ನಗರದಲ್ಲಿ ಎಎಪಿ ಪ್ರಚಾರ
ಕಳೆದ 10 ವರ್ಷಗಳಲ್ಲಿ ಹಣ ಬಲ್ಲ ಇಲ್ಲದೇ ಕೇವಲ ಜನರ ಬೆಂಬಲದಿಂದ ಗೆಲ್ಲಬಹುದು ಎಂದು ಎಎಪಿ ತೋರಿಸಿಕೊಟ್ಟಿದೆ. ಮನೆ ಮನೆ ಪ್ರಚಾರ ಸೇರಿದಂತೆ ಇನ್ನು ಅನೇಕ ವಿಭಿನ್ನ ರೀತಿಯ ಪ್ರಚಾರಗಳು ಬೆಂಗಳೂರಿನಲ್ಲಿ ನಡೆಯಲಿವೆ. ಬೇರೆ ಪಕ್ಷಗಳು ಮಾಡುವ ಖರ್ಚಿಗೆ ಹೋಲಿಸಿದರೆ ನಮ್ಮದೂ ತೀರಾ ಕಡಿಮೆ. ಯಾಕೆಂದರೆ ನಾವು ಹಣ ಹಂಚದೇ ನಮ್ಮದೇ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಇಳಿಯುತ್ತೇವೆ. ಇದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ವೇಳೆ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಪ್ರಚಾರ ಸಮಿತಿ ಸದಸ್ಯರಾದ ಲಕ್ಷ್ಮಿಕಾಂತ್.ರಾವ್ ಹಾಗೂ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಮತ್ತಿತರರು ಉಪಸ್ಥಿತರಿದ್ದರು.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications