ಪುಟಾಣಿಗಳ ಕೌಶಲ್ಯಕ್ಕೆ "ಅಆಇಈ" ತಂದಿದೆ ವಿನೂತನ ಕಾರ್ಯಕ್ರಮ

ಬೆಂಗಳೂರು, ಮಾರ್ಚ್ 13: ಕೌಶಲ್ಯ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಾ ಮಕ್ಕಳಿಗಾಗಿ ಹಲವು ಅಭಿಯಾನಗಳನ್ನು ನಡೆಸಿರುವ ಬೆಂಗಳೂರಿನ ಅಆಇಈ ಸಂಸ್ಥೆ #Also a learning festival ಎಂಬ ನೂತನ ಚಟುವಟಿಕೆ ಆಧಾರಿತ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೊರೊನಾದಿಂದಾಗಿ ಶಾಲೆಗಳು ಮುಚ್ಚಿ, ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿದ ಸಂದರ್ಭದಲ್ಲಿ ಅಆಇಈ #Also_a_learning _festival ಅಭಿಯಾನ ಆರಂಭಿಸಿತ್ತು. ಕಲಿಕೆಯೆಂಬುದು ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಪುಸ್ತಕ, ಪೆನ್ನು, ಬೋರ್ಡು, ಪ್ರಶ್ನೆ ಪತ್ರಿಕೆಗಳಿಂದ ಆಗುವಂಥದ್ದಲ್ಲ. ಕೇಳಿ ತಿಳಿಯುವ, ನೋಡಿ ಅರಿಯುವ, ಮಾಡಿ ಕಲಿಯುವ ಪ್ರತಿಯೊಂದು ವಿಷಯವೂ ಕಲಿಕೆಯೇ. ಪ್ರತಿ ಹೊಸ ವಿಷಯ, ಕಲಿಕೆ ಕೌಶಲ್ಯ ಹಾಗೂ ಮೌಲ್ಯಗಳನ್ನು ಬಿತ್ತುತ್ತದೆ ಎನ್ನುವ ಅರಿವು ಮೂಡಿಸುವ ಸಲುವಾಗಿ ಅಭಿಯಾನ ಆರಂಭಿಸಿತ್ತು.

ಈ ಅಭಿಯಾನದ ಭಾಗವಾಗಿ ಮಕ್ಕಳ ಕಲಿಕೆಯನ್ನು ಮುಂದುವರಿಸಲು "ಸರ್ಪ್ರೈಸ್ ಲರ್ನಿಂಗ್ ಬಾಕ್ಸ್" ಎಂಬ ಕಾರ್ಯಕ್ರಮವನ್ನೂ ಸಂಸ್ಥೆ ರೂಪಿಸಿತ್ತು. ಸ್ವ ಕಲಿಕೆ, ಸ್ವ ನಿರ್ವಹಣೆ ಹಾಗೂ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ಧಡಿಸಲಾದ ಈ ಕಾರ್ಯಕ್ರಮ ವಿಜ್ಞಾನ, ಸಮಾಜ, ಗಣಿತ, ಭಾಷೆ ಎಲ್ಲಾ ವಿಷಯಗಳನ್ನು ಒಳಗೊಂಡಿತ್ತು. ಹಲವು ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು.

 A Aa E Ee Presenting Alsoalearning Festival On March 14 At JP Nagar

ಇದರೊಂದಿಗೆ, ಮಕ್ಕಳು ತಮ್ಮ ಸುತ್ತಮುತ್ತ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಹೇಗೆ ಸ್ವ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು ಎನ್ನುವುದನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ, ಅದರೊಂದಿಗೆ ಕೆಲವು ಅಗತ್ಯ ಪರಿಕರಗಳನ್ನು ಐದು ಶಾಲೆಗಳ 185 ಮಕ್ಕಳಿಗೆ ಸಂಸ್ಥೆ ನೀಡಿತ್ತು. ಎರಡು ತಿಂಗಳ ಈ ಪ್ರಾಯೋಗಿಕ ಕಾರ್ಯಕ್ರಮ ನಿರೀಕ್ಷೆಗಿಂತಲೂ ಹೆಚ್ಚಿನ ಫಲಿತಾಂಶ ನೀಡಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳುವ ಸಲುವಾಗಿ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಂಡಿದೆ. ಸದ್ಯಕ್ಕೆ ಬೆಂಗಳೂರು ನಗರದ ಐದು ಸರ್ಕಾರಿ ಶಾಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

#Also a learning festival ಕಾರ್ಯಕ್ರಮ ಚಟುವಟಿಕೆ ಆಧಾರಿತವಾಗಿದ್ದು, ಶಿಕ್ಷಣದ ಕುರಿತಾದ ಹೊಸ ಹೊಳಹುಗಳನ್ನು ನೀಡಲಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಸಿನಿಮಾ ನಿರ್ದೇಶಕ, ರಂಗ ನಿರ್ದೇಶಕ ಹಾಗೂ ಬರಹಗಾರ ಯೋಗೇಶ್ ಮಾಸ್ಟರ್ ಹಾಗೂ ಸಂಪ್ರದಾಯ ಟ್ರಸ್ಟ್ ಉಪ ಸಂಸ್ಥಾಪಕ ಹಾಗೂ ಜೀವನ ಕೌಶಲ್ಯ ತರಬೇತುದಾರ ಚೇತನ್ ಡಿ.ಪಿ. ಕಾರ್ಯಕ್ರಮದ ಅತಿಥಿಗಳಾಗಲಿದ್ದಾರೆ.

ಕಾರ್ಯಕ್ರಮ ದಿನಾಂಕ; ಮಾರ್ಚ್ 14, ಭಾನುವಾರ ಬೆಳಿಗ್ಗೆ 10.30
ಸ್ಥಳ: ವಿಇಟಿ ಫಸ್ಟ್‌ ಗ್ರೇಡ್ ಕಾಲೇಜು ಸಭಾಂಗಣ, ಜೆ.ಪಿ ನಗರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+