ರಾಜ್ಯದಲ್ಲಿ 8 ಕೇಸ್ ಪತ್ತೆ, ಕಲಬುರಗಿ ಹೆಚ್ಚು, ಬೆಂಗಳೂರಿಗೆ ರಿಲೀಫ್

ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿಂದು ಮತ್ತೆ 8 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಮಾಧ್ಯಮ ಪ್ರಕಟಣೆ ಮಾಡಿರುವ ಇಲಾಖೆ, ಒಟ್ಟು ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಹೊಸ 8 ಪ್ರಕರಣಗಳ ಪೈಕಿ ಕಲಬುರಗಿ 6, ಗದಗ್ 1 ಹಾಗು ಬೆಂಗಳೂರಿನಲ್ಲಿ 1 ಪ್ರಕರಣ ಪ್ರಕರಣ ಪತ್ತೆಯಾಗಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ಈವರೆಗೆ 198 ಜನರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 20 ಜನರ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಉಳಿದ 232 ಸೋಂಕಿತರಲ್ಲಿ ಗರ್ಭಿಣಿ ಸೇರಿದಂತೆ 227 ಜನರ ಆರೋಗ್ಯ ಸ್ಥಿರವಾಗಿದೆ ಹಾಗೂ 5 ಸೋಂಕಿತರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

8 New COVID19 Case In Karnataka Today

ಕಲಬುರಗಿಯ 425ನೇ ರೋಗಿ ಸಂಪರ್ಕದಲ್ಲಿದ್ದ ಆರು ಜನರಿಗೆ ಇಂದು ಕೊವಿಡ್ ಸೋಂಕು ಖಚಿತವಾಗಿದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕೇವಲ ಒಂದು ಪ್ರಕರಣ ಮಾತ್ರ ಕಾಣಿಸಿಕೊಂಡಿತ್ತು. ಇಂದು ಕೂಡ ಒಂದು ಕೇಸ್ ವರದಿಯಾಗಿದೆ. ಹಾಗಾಗಿ, ಬೆಂಗಳೂರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ.

ಕಲಬುರಗಿ ಮೂಲದ 57 ವರ್ಷದ ವ್ಯಕ್ತಿ ತೀವ್ರ ಉಸಿರಾಟ ತೊಂದರೆಯಿಂದ ಏಪ್ರಿಲ್ 24 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆತನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 27ರ ಸಂಜೆ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+