ಬೆಂಗಳೂರು: ಅಪಾಯಕಾರಿ ಟ್ರಾಫಿಕ್ ಬಗ್ಗೆ ತಾನೇ ಎಚ್ಚರಿಕೆ ನೀಡಿ, ರಸ್ತೆ ಅಪಘಾತದಲ್ಲಿ ಮೃತಪಟ್ಟ ವೃದ್ಧ

ಬೆಂಗಳೂರು, ಜ. 06: ತಮ್ಮ ಏರಿಯಾದಲ್ಲಿನ ಅಪಾಯಕಾರಿ ಟ್ರಾಫಿಕ್ ಬಗ್ಗೆ ಎಚ್ಚರಿಸಿದ ಬೆಂಗಳೂರಿನ ವ್ಯಕ್ತಿ ಎರಡು ದಿನಗಳ ನಂತರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರವ ದುರಂತ ಘಟನೆ ವರದಿಯಾಗಿದೆ.

ಜನವರಿ 1 ರಂದು, 68 ವರ್ಷದ ರಘುನಾಥ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಇರುವ ತಮ್ಮ ಕ್ಲಾಸಿಕ್ ಆರ್ಚರ್ಡ್ಸ್ ಲೇಔಟ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಬಗ್ಗೆ ಟೆಲಿಗ್ರಾಮ್‌ನಲ್ಲಿರುವ ತಮ್ಮ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಗುಂಪಿಗೆ ಸಂದೇಶ ಕಳುಹಿಸಿದ್ದಾರೆ. ಇಲ್ಲಿನ ಟ್ರಾಫಿಕ್ ನಿಯಂತ್ರಿಸಲು ಈ ಪ್ರದೇಶದಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲು ಟ್ರಾಫಿಕ್ ಪೊಲೀಸರನ್ನು ವಿನಂತಿಸಬಹುದೇ ಎಂದು ರಘುನಾಥ್ ತಮ್ಮ ಸಂದೇಶದಲ್ಲಿ ಕೇಳಿದ್ದಾರೆ.

ಒಂದೆರಡು ದಿನಗಳ ನಂತರ ಅಂದರೆ ಜನವರಿ 3ರ ಮಂಗಳವಾರ, ರಘುನಾಥ್ ತಮ್ಮ ಕ್ಲಾಸಿಕ್ ಆರ್ಚರ್ಡ್ಸ್ ಲೇಔಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

68 year old man warns of dangerous traffic, after 2 days he dies in accident

ಮೃತ ರಘುನಾಥ್ ಅವರು ವಾಸವಿದ್ದ ಕ್ಲಾಸಿಕ್ ಆರ್ಚರ್ಡ್ಸ್ ಲೇಔಟ್ ನಿವಾಸಿಗಳು, ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ನಿರ್ಮಾಣದಿಂದಾಗಿ ಸಂಚಾರ ವ್ಯತ್ಯಯ ಉಂಟಾಗುತ್ತಿದ್ದು, ತಮ್ಮ ಬಡಾವಣೆಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿಗುತ್ತಿದೆ ಎಂದು ಹೇಳಿದ್ದಾರೆ.

"ಈ ವಸತಿ ಪ್ರದೇಶದಲ್ಲಿ ಮಕ್ಕಳು ಮತ್ತು ವೃದ್ಧರು ಸೇರಿದಂತೆ 1,500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅಪಘಾತಕ್ಕೂ ಮುನ್ನ, ಇಲ್ಲಿನ ನಿವಾಸಿಗಳಿಗೆ ಅಪಾಯಕಾರಿಯಾಗಿರುವ ಟ್ರಾಫಿಕ್ ನಿಯಂತ್ರಿಸುವಂತೆ ನಾವು ಪೊಲೀಸರು ಮತ್ತು ಬಿಎಂಆರ್‌ಸಿಎಲ್‌ಗೆ ತಿಳಿಸಿದ್ದೇವೆ. ಬಿಎಂಆರ್‌ಸಿಎಲ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದ್ದರೂ ಅದನ್ನು ಜಾರಿಗೊಳಿಸಲು ಏನನ್ನೂ ಮಾಡಲಿಲ್ಲ. ಹೆಚ್ಚಿನ ವಾಹನಗಳು ಲೇಔಟ್‌ನತ್ತ ಹರಿಯುತ್ತಲೇ ಇತ್ತು " ಎಂದು ಕ್ಲಾಸಿಕ್ ಆರ್ಚರ್ಡ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷೆ ಸ್ವರೂಪಾ ಕಾಕುಮಾನು ಆರೋಪಿಸಿದ್ದಾರೆ.

ಬೆಂಗಳೂರು ಮಿರರ್ ಪ್ರಕಾರ, 2022 ರಲ್ಲಿ ಬೆಂಗಳೂರಿನಲ್ಲಿ 228 ಪಾದಚಾರಿ ಸಾವುಗಳು ವರದಿಯಾಗಿವೆ. 2021 ಕ್ಕೆ ಹೋಲಿಸಿದರೆ ಈ ಪಾದಚಾರಿ ಸಾವಿಗಳಲ್ಲಿ 43% ಹೆಚ್ಚಳವಾಗಿದೆ. ಈ 228 ದಾಖಲಾದ ಸಾವುಗಳು. ದಾಖಲಾಗದ ಪಾದಚಾರಿ ಸಾವುಗಳೇ ಹೆಚ್ಚು. ವರ್ಷದಿಂದ ವರ್ಷಕ್ಕೆ ಈ ಸಾವುಗಳು ಹೆಚ್ಚುತ್ತಿರುವ ವರದಿಗಳನ್ನು ನೋಡುತ್ತಿದ್ದೇವೆ. ಪಾದಚಾರಿಗಳ ಸಂಪೂರ್ಣ ನಿರ್ಲಕ್ಷ್ಯದ ಬಗ್ಗೆ ಬರೀ ವಿಷಾದ ವ್ಯಕ್ತಪಡಿಸಲಾಗುತ್ತಿದೆ. ಈ ಬಗ್ಗೆ ಕಾನೂನು ತರಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+