ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

ಬೆಂಗಳೂರು, ನವೆಂಬರ್ 29 : ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಸುತ್ತಲು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಯೋಜನೆಗೆ ಒಪ್ಪಿಗೆ ನೀಡಿದೆ. ಈ ರಸ್ತೆಯನ್ನು ನೈಸ್‌ ರಸ್ತೆಗೆ ಸಂಪರ್ಕಿಸಲಾಗುತ್ತದೆ. ಆದರೆ, ಹೇಗೆ ಎಂಬುದು ಅಧಿಕಾರಿಗಳ ಪ್ರಶ್ನೆ.

ಬೆಂಗಳೂರು ನಗರದ ಸುತ್ತ 17 ಸಾವಿರ ಕೋಟಿ ವೆಚ್ಚದಲ್ಲಿ 65 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. 12 ವರ್ಷಗಳ ಹಿಂದೆ ರೂಪಿಸಿದ್ದ ಯೋಜನೆ ಈಗ ಜಾರಿಗೆ ಬರುತ್ತಿದೆ.

ಪ್ರಸ್ತುತ ಇರುವ ನೈಸ್ ರಸ್ತೆ ತುಮಕೂರು ರಸ್ತೆ-ಮಾಗಡಿ ರಸ್ತೆ-ಮೈಸೂರು ರಸ್ತೆ-ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈಗ ನಿರ್ಮಾಣ ಮಾಡಲು ಉದ್ದೇಶಿಸಿರುವ ಪೆರಿಫೆರಲ್ ರಿಂಗ್ ರಸ್ತೆ ಹೊಸೂರು ರಸ್ತೆ-ಹಳೆ ಮದ್ರಾಸ್ ರಸ್ತೆ-ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಬೆಂಗಳೂರು ನಗರದ ಸುತ್ತಲೂ ರಿಂಗ್ ರಸ್ತೆ ನಿರ್ಮಾಣವಾದಂತೆ ಆಗಲಿದೆ.

65 km Peripheral Ring Road BDA need 300 acres of land

ಕಳೆದ ವಾರ ಸಭೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪೆರಿಫೆರಲ್ ರಿಂಗ್ ರಸ್ತೆಯನ್ನು ನೈಸ್ ರಸ್ತೆಗೆ ಸಂಪರ್ಕಿಸಲು 300 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಅಂದಾಜಿಸಿದ್ದಾರೆ.

ತುಮಕೂರು ರಸ್ತೆ ಮತ್ತು ಹೊಸರು ರಸ್ತೆಯ ಭಾಗದಲ್ಲಿ ತಲಾ 150 ಎಕರೆ ಜಮೀನು ಸಿಕ್ಕರೆ ಪೆರಿಫೆರಲ್ರಿಂಗ್ ರಸ್ತೆಯನ್ನು ನೈಸ್ ರಸ್ತೆಗೆ ಸಂಪರ್ಕಿಸಬಹುದು ಎಂದು ಅಂದಾಜಿಸಿದ್ದಾರೆ. ರಸ್ತೆ ಮಾರ್ಗದ ಸಮೀಕ್ಷೆಯನ್ನು ನಡೆಸಿ, ನಂತರ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.

ಕರ್ನಾಟಕ ಸರ್ಕಾರ ಭೂ ಸ್ವಾಧೀನಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಬಿಡಿಎಗೆ ನೀಡಲಿದೆ. ಆದರೆ, ಅದಕ್ಕಿಂತ ಹೆಚ್ಚಿನ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸರ್ವೇ ಕಾರ್ಯಗಳು ಮುಗಿದ ಬಳಿಕ ಎಷ್ಟು ಭೂಮಿ ಬೇಕಾಗಬಹುದು? ಎಂಬ ಅಂದಾಜು ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+