ಮಹಿಳೆಯರ ಮೇಲೆ ದಾಳಿಗೆ ಯತ್ನ: 6 ಬಂಧನ

ರಾತ್ರಿ ಇನ್ನೋವಾ ಕಾರಿನಲ್ಲಿ ಮಹಿಳೆಯರು ಕುಳಿತಿದ್ದಾಗ ಆರೋಪಿಗಳು ಕಾರನ್ನು ಸುತ್ತುವರಿದು ಹೊರಗಿಳಿಯುವಂತೆ ಬೆದರಿಕೆ ಹಾಕಿದ್ದರು. ಕಾರಿನಲ್ಲಿದ್ದ ಮಹಿಳೆಯರು ಬಾಗಿಲು ಮುಚ್ಚಿಕೊಂಡು ಆರೋಪಿಗಳ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಸಹಾಯಕ್ಕಾಗಿ ಕೂಗತೊಡಗಿದಾಗ ಆರೋಪಿಗಳು ಓಡಿ ಹೋಗಿದ್ದರು. [ಮಹಿಳೆಯರ ಮೇಲೆ ದಾಳಿಗೆ ಯತ್ನ]
ಮಹಿಳೆಯರು ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋದಲ್ಲಿ 45 ಸೆಕೆಂಡ್‌ಗಳ ಕಾಲ ದೃಷ್ಯಾವಳಿಗಳಿವೆ. ಮಹಿಳೆಯರು ಸಹಾಯಕ್ಕಾಗಿ ಕೂಗಿಕೊಂಡಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಪ್ರಕರಣ ನಡೆದು 48 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿರುವುದನ್ನು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಶ್ಲಾಘಿಸಿದ್ದಾರೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಾರಿನಿಂದ ಚಾಲಕ ಇಳಿದು ಹೋದ ಮೇಲೆ ಯಾವುದೇ ಪುರುಷರೂ ಇಲ್ಲದಿರುವುದನ್ನು ನೋಡಿ ಕಿರುಕುಳ ನೀಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆಂದು ಎಂ.ಎನ್. ರೆಡ್ಡಿ ಮಾಹಿತಿ ನೀಡಿದ್ದಾರೆ.
ನಂತರ ಮಹಿಳೆಯರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಬೆಂಗಳೂರು ಕೇಂದ್ರ ಪೊಲೀಸ್ ಉಪ ಆಯುಕ್ತ ಸಂದೀಪ ಪಾಟೀಲ ತಿಳಿಸಿದ್ದರು. [ಹಾಲು ತರಲು ಹೋದ ಮಹಿಳೆ ಮೇಲೆ ಅತ್ಯಾಚಾರ]
ಜನಜಂಗುಳಿ ಪ್ರದೇಶದಲ್ಲಿಯೇ ಮಹಿಳೆಯರ ಮೇಲೆ ದಾಳಿಗೆ ಯತ್ನ ನಡೆದಿದ್ದು ಹಾಗೂ ಸಹಾಯಕ್ಕಾಗಿ ಕೂಗಿಕೊಂಡಾಗ ಸ್ಥಳದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇಲ್ಲದಿದ್ದುದು ಅಸಮಾಧಾನಕ್ಕೆ ಕಾರಣವಾಗಿತ್ತು.












Click it and Unblock the Notifications