ಬೆಂಗಳೂರು ಅಭಿವೃದ್ಧಿಗೆ 3,500 ಕೋಟಿ ವೆಚ್ಚದ ಕಾಮಗಾರಿಗಳು

ಬೆಂಗಳೂರು, ಮೇ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ 3,500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ 1000 ಕೋಟಿ. ರೂ,ಗಳ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸರ್ಕಾರ ಕೈಗೊಳ್ಳಲಿರುವ ಕಾಮಗಾರಿಗಳ ವಿವರಗಳನ್ನು ನೀಡಿದ್ದಾರೆ. 2015-16ನೇ ಸಾಲಿನ ಬಜೆಟ್‌ನಲ್ಲಿ ನಗರದ ಮೂಲಸೌಕರ್ಯಕ್ಕೆ 1,500 ಕೋಟಿ ರೂ. ಅನುದಾನ ಮೀಸಲಾಗಿಡಲಾಗಿದೆ ಎಂದರು. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ]

ramalinga reddy

ಬಜೆಟ್ ಅನುದಾನದ ಜೊತೆಗೆ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ 1,000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಇದರ ಜೊತೆಗೆ ಹಿಂದಿನ ವರ್ಷದ ಅನುದಾನದಲ್ಲಿ 1,000 ಕೋಟಿ ರೂ. ಬಳಕೆ ಮಾಡುವುದು ಬಾಕಿ ಇದೆ. ಎಲ್ಲವೂ ಸೇರಿ 3,500 ಕೋಟಿ ರೂ. ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.[ಬೆಂಗಳೂರಿಗೆ 3 ಎಲಿವೇಟೆಡ್ ರಸ್ತೆ ಕೊಡುಗೆ ನೀಡಿದ ಸಿಎಂ]

ಕೈಗೊಳ್ಳಲಿರುವ ಯೋಜನೆಗಳ ವಿವರಗಳು

* 139 ಕೋಟಿ ರೂ. ವೆಚ್ಚದಲ್ಲಿ ಮಿನರ್ವ ವೃತ್ತದಿಂದ ಜೆ.ಸಿ. ರಸ್ತೆವರೆಗೆ 3 ಕಿ.ಮೀ. ಉಕ್ಕಿನ ಸೇತುವೆ ನಿರ್ಮಾಣ
* 57 ಕೋಟಿ ರೂ. ವೆಚ್ಚದಲ್ಲಿ ಶಿವಾನಂದ ವೃತ್ತದಲ್ಲಿ 700 ಮೀಟರ್‌ ಉಕ್ಕಿನ ಸೇತುವೆ ನಿರ್ಮಾಣ
* 214 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ-ಈಜೀಪುರದಲ್ಲಿ 2.4 ಕಿ.ಮೀ. ಮೇಲುಸೇತುವೆ ನಿರ್ಮಾಣ
* ಓಕುಳಿಪುರಂ ಕಾರಿಡಾರ್ ಯೋಜನೆ
* ಫ್ರೀಡಂಪಾರ್ಕ್‌ ಮತ್ತು ಗಾಂಧಿ ನಗರದಲ್ಲಿ ಬಹುಹಂತದ ವಾಹನ ನಿಲ್ದಾಣ ಕಟ್ಟಡ ನಿರ್ಮಾಣ
* ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು
* ಮೂರು ಎಲಿವೇಟೆಡ್ ರಸ್ತೆಗಳ ನಿರ್ಮಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+