ನಿಷೇಧಾಜ್ಞೆ ಮುಂದುವರಿಕೆ ಆದರೆ ಸಂಜೆಗೆ ತೆರೆಯುತ್ತೆ ಬಾರು-ಪಬ್ಬು
Recommended Video
Karnataka Crisis : ಬೆಂಗಳೂರಿನಲ್ಲಿ ಮದ್ಯ ಮಾರಾಟದ ಮೇಲಿನ ನಿಷೇಧ ತೆರವು ಮಾತ್ರವೇ | Oneindia Kannada
ಬೆಂಗಳೂರು, ಜುಲೈ 24: ನಗರದಲ್ಲಿ ಎರಡು ದಿನಗಳ ಕಾಲ ಹೇರಲಾಗಿದ್ದ ನಿಷೇಧಾಜ್ಞೆ ಮುಂದುವರೆದಿದೆ. ಆದರೆ ಮದ್ಯ ಮಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಮಾತ್ರವೇ ತೆರವು ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಕಮೀಷನರ್ ಅವರು ನಿನ್ನೆ ಸಂಜೆ ಆರು ಗಂಟೆಯಿಂದ ಜುಲೈ 25 ರ ವರೆಗೆ ನಗರದಲ್ಲಿ ನಿಷೇಧಾಜ್ಞೆ ಹೇರಿದ್ದರು. ರಾಜಕೀಯ ಪಲ್ಲಟವಾದ ಕಾರಣ ಗಲಾಟೆಗಳು ಸಂಭವಿಸಬಹುದಾದ ಆತಂಕ ಇದ್ದ ಕಾರಣ ಈ ನಿರ್ಣಯವನ್ನು ಅವರು ತೆಗೆದುಕೊಂಡಿದ್ದರು.
ಜೊತೆಗೆ ನಿನ್ನೆ ಸಂಜೆ ಇಂದಲೇ ಮದ್ಯ ಮಾರಾಟಕ್ಕೆ ಸಹ ಎರಡು ದಿನಗಳ ನಿಷೇಧ ಹೇರಲಾಗಿತ್ತು. ಆದರೆ ಇಂದು ಈ ಆದೇಶವನ್ನು ಹಿಂಪಡೆದಿದ್ದು, ಬಾರು-ಪಬ್‌ಗಳು ಇಂದು ಸಂಜೆ 6 ಗಂಟೆಯಿಂದ ಪುನರ್ ಆರಂಭ ಮಾಡಲಿವೆ.

ಆದರೆ ಸಿಆರ್‌ಪಿಸಿ 144 ಸೆಕ್ಷನ್ ಪ್ರಕಾರ ಹೇರಲಾಗಿದ್ದ ನಿಷೇಧಾಜ್ಞೆ ಮುಂದುವರೆದಿದ್ದು, ನಾಳೆಯ ವರೆಗೂ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.












Click it and Unblock the Notifications