ಬೆಂಗಳೂರು ರಸ್ತೆ ಅಭಿವೃದ್ಧಿಗೆ 1,700 ಕೋಟಿ ರೂಪಾಯಿ: ಡಿ.ಕೆ ಶಿವಕುಮಾರ್!
ಬೆಂಗಳೂರಿನ ರಸ್ತೆಗಳನ್ನು ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಕನಿಷ್ಠ 30 ವರ್ಷಗಳ ಕಾಲ ಬಾಳಿಕೆ ಬರುವಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಭಾನುವಾರ ಬೆಂಗಳೂರಿನ ಪಶ್ಚಿಮ ವಲಯ ಸೇರಿದಂತೆ ವಿವಿಧ ಭಾಗದಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಬರೋಬ್ಬರಿ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನ ರಸ್ತೆಗಳನ್ನು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸುವುದು ಹಾಗೂ ನಗರದಲ್ಲಿ ರಸ್ತೆಗಳು ದೀರ್ಘಕಾಲದ ವರೆಗೆ ಬಾಳಿಕೆ ಬರುವಂತೆ ಮಾಡುವ ಉದ್ದೇಶದಿಂದ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದೀಗ ಬೆಂಗಳೂರಿನ 150 ಕಿ.ಮೀ ರಸ್ತೆ ವ್ಯಾಪ್ತಿಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದಕ್ಕೆ ಬರೋಬ್ಬರಿ 1,700 ಕೋಟಿ ರೂಪಾಯಿ ಅನುದಾನವನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ.

ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಬೆಂಗಳೂರಿನಲ್ಲಿ 150 ಕಿ.ಮೀ ರಸ್ತೆ ವ್ಯಾಪ್ತಿಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ನಗರದಲ್ಲಿನ ರಸ್ತೆಗಳು ಕನಿಷ್ಠ 30 ವರ್ಷ ಏನೂ ಆಗಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಈ ಕಾಮಗಾರಿಗಳನ್ನು ನಡೆಸುವುದಕ್ಕೆ ಮಳೆ ನಿಲ್ಲಲಿ ಎಂದು ಕಾಯುತ್ತಿದ್ದೆವು. ಹೀಗಾಗಿ, ಒಂದು ತಿಂಗಳು ತಡವಾಗಿದೆ ಎಂದು ಅವರು ಹೇಳಿದರು.
ಟೇಪ್ ಹಿಡಿದು ಪರಿಶೀಲನೆ ಮಾಡಿದ ಡಿ.ಕೆ ಶಿವಕುಮಾರ್
ಇನ್ನು ಕಾಮಗಾರಿಗಳನ್ನು ಪರಿಶೀಲನೆ ಮಾಡುವಾಗ ಡಿ.ಕೆ ಶಿವಕುಮಾರ್ ಅವರು ಟೇಪ್ ಹಿಡಿದುಕೊಂಡು ರಸ್ತೆಯ ದಪ್ಪ ಹಾಗೂ ಅಳತೆಯನ್ನು ಪರಿಶೀಲನೆ ಮಾಡಿದರು. ಕಾಮಗಾರಿಯ ಕ್ವಾಲಿಟಿ ತುಂಬಾ ಇಂಪಾರ್ಟೆಂಟ್ ಇದೇ ಕಾರಣಕ್ಕೆ ನಾನೇ ಪರಿಶೀಲನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸಹ ಕ್ವಾಲಿಟಿ ಟೆಸ್ಟ್ ಮಾಡಲಿದ್ದಾರೆ. ಕ್ವಾಲಿಟಿ ಸರಿಯಾಗಿ ಇದ್ದರೆ ಮಾತ್ರ ಗುತ್ತಿಗೆದಾರರಿಗೆ ದುಡ್ಡು ಕೊಡ್ತೀವಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

450 ಕಿ.ಮೀನಲ್ಲಿ ವೈಟ್‌ಟಾಪಿಂಗ್: ಇನ್ನು ಬೆಂಗಳೂರಿನ 450 ಕಿ.ಮೀ ರಸ್ತೆಗಳಲ್ಲಿ ಮುಂದಿನ ದಿನಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುವುದು. ವೈಟ್‌ಟಾಪಿಂಗ್‌ಗಾಗಿ 1,700 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಕಾಮಗಾರಿಗಳ ಕ್ವಾಲಿಟಿಯನ್ನು ನಾನೇ ಪರಿಶೀಲನೆ ಮಾಡುತ್ತಿದ್ದೇನೆ. ಹೊಸ ಪ್ರದೇಶಗಳಲ್ಲಿ ವೈಟ್‌ಟಾಪಿಂಗ್ ಮಾಡುವುದಕ್ಕೆ ಈಗಾಗಲೇ ಡಿಪಿಆರ್ ಸಹ (ಕಾಮಗಾರಿ ನಕ್ಷೆ/ ಪ್ಲಾನ್) ಸಹ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಮನ್ವಯತೆ ಸಾಧಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಒಂದೇ ರಾತ್ರಿಯಲ್ಲಿ ಆಗಲ್ಲ: ಇನ್ನು ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಕಾನ್ಸೆಪ್ಟ್‌ನಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂದೇ ದಿನದಲ್ಲಿ ಎಲ್ಲಾ ಆಗಲ್ಲ. ಇಲ್ಲ ರಾತ್ರೋರಾತ್ರಿ ಎಲ್ಲವೂ ಬದಲಾಗುವುದಿಲ್ಲ. ಹಂತ ಹಂತವಾಗಿ ಎಲ್ಲವನ್ನೂ ಪ್ಲಾನಿಂಗ್ ಮಾಡಿಕೊಂಡು ಮಾಡಲಾಗುತ್ತಿದೆ. ಹಣ ಕಾಸು ವ್ಯವಸ್ಥೆಯನ್ನು ನೋಡಿಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications