ದುರ್ಗಾಮಾತಾ ಮೆರವಣಿಗೆ ವೇಳೆ ಲಾರಿ ಹರಿದು ಮೂವರ ಸಾವು

ಚಿಕ್ಕೋಡಿ, ಅಕ್ಟೋಬರ್ 10: ದುರ್ಗಾಮಾತಾ ಮೆರವಣಿಗೆ ಹೊರಟಿದ್ದ ಗುಂಪಿನ ಮೇಲೆ ಲಾರಿ ಹರಿದು ಬಾಲಕ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿಯ ಕಾಗವಾಡ ಸಮೀಪದ ಗಣೇಶವಾಡಿ ಗ್ರಾಮದ ಬಳಿ ನಡೆದಿದೆ.

ಈ ಘಟನೆಯಲ್ಲಿ ಎರಡು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಬುಧವಾರ ತಡರಾತ್ರಿ ದುರ್ಗಾ ಮಾತಾ ಮೆರವಣಿಗೆ ತೆರಳುವಾಗ ಈ ಅವಘಡ ನಡೆದಿದೆ. ಹನಸೇನ ಗೂಳಪ್ಪನವರ (2), ಸಂಜಯ ರಾವಸಾಬ ಪಾಟೀಲ (40), ಸಚಿನ ಕರಗೌಡ ಪಾಟೀಲ (35) ಮೃತಪಟ್ಟವರು. ಮೃತರೆಲ್ಲರೂ ಗಣೇಶವಾಡಿ ಗ್ರಾಮದ ನಿವಾಸಿಗಳು.

Three Killed As Lorry Crashes During Durgamata Parade In Chikkodi

ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅವರನ್ನು ಮಿರಜ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+