ಬೆಳಗಾವಿಯಲ್ಲಿ ರಾಷ್ಟ್ರ ಭಕ್ತರ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಪ್ರತಿಭಟನೆ
ಬೆಳಗಾವಿ, ಡಿಸೆಂಬರ್ 16: ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಿಂದೂ ಪರ ಮತ್ತು ರಾಷ್ಟ್ರ ಭಕ್ತರ ಹತ್ಯೆ ವಿರೋಧಿಸಿ ಪ್ರತಿಭಟನೆ ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತ ಒಬ್ಬ ರಾಷ್ಟ್ರ ಪ್ರೇಮಿ. ಆತನನ್ನು ಹಿಂಸಿಸೆ ಕೊಲೆ ಮಾಡಲಾಗಿದೆ. ಸರ್ಕಾರ ಇದನ್ನ ಗಂಭಿರವಾಗಿ ಪರಿಗನಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಇದು ಕೇವಲ ರಾಜ್ಯ ದಲ್ಲಿ ಮಾತ್ರವಲ್ಲ. ರಾಷ್ಟ್ರಾದಂತ್ಯ ಇದೆ ಪರಿಸ್ತಿತಿ ಇದೆ. ಈ ದೇಶದಲ್ಲೂ ರಾಷ್ಟ್ರ ಭಕ್ತರಿಗೆ ಭದ್ರತೆ ಇಲ್ಲ, ಬೆಳಗಾವಿಯಲ್ಲೂ ಇಂಥದೇ ಪರಿಸ್ಥಿತಿ ಇದೆ. ಇಲ್ಲಿ ಸಾಮನ್ಯ ಜನರನ್ನ ಹಿಡಿದು ಲೂಟಿ ಮಾಡಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಇಂಥ ಒಂದು ಗ್ಯಾಂಗನ್ನು ನಾವೇ ಹಿಡಿದು ಕೊಟ್ಟಿದ್ದೇವೆ. ಲೂಟಿ ಕೊರರಿಂದ ನಮಗೆ ಧಮಕಿ ಇದೆ. ಜೈಲಿನಿಂದ ಬಂದ ಮೇಲೆ ನಮ್ಮನ್ನು ನೊಡಿಕೊಳ್ಳುತ್ತೇನೆ ಎಂದಿದ್ದಾರೆ. ಇಲ್ಲಿ ಲೂಟಿಕೋರರಿಗೆ ಹೆದರಬೇಕಾಗಿದೆ ಎಂದು ಹೇಳಿದರು.












Click it and Unblock the Notifications