"ಯಡಿಯೂರಪ್ಪ ಮೂರ್ಖ, ಅಲ್ಲಲ್ಲ ಈಶ್ವರಪ್ಪ ಮೂರ್ಖ"

ಬೆಳಗಾವಿ, ಆಗಸ್ಟ್ 28: ಆಪರೇಷನ್ ಕಮಲದ ಜನಕ ಸಿದ್ದರಾಮಯ್ಯ ಎಂಬ ಈಶ್ವರಪ್ಪ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದಾರೆ. ಜೊತೆಗೆ ಈಶ್ವರಪ್ಪ ಅವರನ್ನು ಟೀಕಿಸುವ ಭರದಲ್ಲಿ ಈಶ್ವರಪ್ಪ ಎನ್ನುವ ಬದಲು ಯಡಿಯೂರಪ್ಪ ಮೂರ್ಖ ಎಂದಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಯಡಿಯೂರಪ್ಪ ಮೂರ್ಖ, ಸಾರಿ, ಸಾರಿ... ಈಶ್ವರಪ್ಪ ಮೂರ್ಖ. ಅವರ ನಾಲಿಗೆ ಬ್ರೈನ್ ಗೆ ಲಿಂಕೇ ಇಲ್ಲ" ಎಂದು ಟೀಕಿಸಿದ್ದಾರೆ.

ತಮ್ಮನ್ನು ಆಪರೇಷನ್ ಕಮಲದ ಜನಕ ಎಂದಿರುವ ಈಶ್ವರಪ್ಪ ಅವರ ಬಗ್ಗೆ ಈ ರೀತಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಬಿಜೆಪಿ ಸರ್ಕಾರದ ಕಾರ್ಯವೈಖರಿ ಕುರಿತೂ ಮಾತನಾಡಿದರು. ' ಪ್ರವಾಹದಲ್ಲಿ ತತ್ತರಿಸಿರುವ ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಯಾರನ್ನಾದರೂ ಏನಾದರೂ ಮಾಡಿಕೊಳ್ಳಲಿ. ನಾವು ಜನರ ಸಂಕಷ್ಟಕ್ಕೆ ಸ್ಪಂದಿಸುವವರು. ಇಲ್ಲಿ ಪ್ರವಾಹ ಇದ್ದರೆ, ಅಲ್ಲಿ ಯಡಿಯೂರಪ್ಪ ದಿಲ್ಲಿ, ಬೆಂಗಳೂರಿಗೆ ಓಡಾಡಿಕೊಂಡಿದ್ದಾರೆ" ಎಂದು ಆರೋಪಿಸಿದರು.

Siddaramaiah Reacts To The Statement Of Eshwarappa In Belagavi

"ರಾಜ್ಯದ ಆಡಳಿತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈಯಲ್ಲಿದೆ. ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ಅವರೇ ಕೈಗೊಂಬೆಯಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಪರಿಹಾರ ತಂದಿದ್ದಾರೆ ಎಂಬುದನ್ನು ಹೇಳಲಿ, ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+