ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶೆಟ್ಟರ್ ಸೊಸೆ ಬಿಜೆಪಿ ಅಭ್ಯರ್ಥಿ?

|
Google Oneindia Kannada News

ಬೆಳಗಾವಿ, ಅಕ್ಟೋಬರ್ 21; ಬೆಳಗಾವಿ ರಾಜಕೀಯದಲ್ಲಿ ಮತ್ತೊಂದು ಸುದ್ದಿ ಹರಿದಾಡಲು ಆರಂಭಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶ್ರದ್ಧಾ ಶೆಟ್ಟರ್ ಕಣಕ್ಕಿಳಿಯಲಿದ್ದಾರೆ ಎಂಬುದು ಸುದ್ದಿ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಪುತ್ರಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ರಾಜ್ಯ ರಾಜಕೀಯಕ್ಕೆ ಬರಲಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿಯೂ ಶ್ರದ್ಧಾ ಶೆಟ್ಟರ್ ಹೆಸರು ಕೇಳಿ ಬಂದಿತ್ತು.

ಬೆಳಗಾವಿ ರಾಜಕೀಯ; ಬಂತೊಂದು Breaking News! ಬೆಳಗಾವಿ ರಾಜಕೀಯ; ಬಂತೊಂದು Breaking News!

ಬೆಳಗಾವಿ ಗ್ರಾಮೀಣ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಶಾಸಕಿ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಬಿಜೆಪಿಯಿಂದ ಶ್ರದ್ಧಾ ಶೆಟ್ಟರ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಬಿಜೆಪಿಯ ಯಾವ ನಾಯಕರು ಸಹ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಮತ್ತಷ್ಟು ವಿಳಂಬ? ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಮತ್ತಷ್ಟು ವಿಳಂಬ?

ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಕಾಂಗ್ರೆಸ್ ನಾಯಕರು. ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹಿನ್ನಡೆ ಉಂಟು ಮಾಡಲು ಶ್ರದ್ಧಾ ಶೆಟ್ಟರ್ ಅಭ್ಯರ್ಥಿಯಾಗಲಿದ್ದಾರೆಯೇ? ಕಾದು ನೋಡಬೇಕು. ಶ್ರದ್ಧಾ ಶೆಟ್ಟರ್ ಈ ಕುರಿತು ಮಾತನಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ

ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿಲ್ಲ

ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿಲ್ಲ

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಮಾತನಾಡಿದ ಶ್ರದ್ಧಾ ಶೆಟ್ಟರ್, "ಚುನಾವಣೆ ಸ್ಪರ್ಧೆ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ನಮ್ಮ ತಂದೆಯವರು ಮಾಡಬೇಕಿದ್ದ ಕೆಲಸಗಳನ್ನು ಮುಂದುವರೆಸಬೇಕಿದೆ. ಜನರ ಬಂದು ಸಮಸ್ಯೆ ಹೇಳಿಕೊಳ್ಳುತ್ತಾರೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಮಾತ್ರವಲ್ಲ. ಎಲ್ಲರೂ ಬಂದು ಭೇಟಿಯಾಗುತ್ತಾರೆ. ಜನರು ಬಂದು ಭೇಟಿಯಾದಾಗ ಸಂತಸವಾಗುತ್ತದೆ. ಅವರ ಸಮಸ್ಯೆ ಬಗೆಹರಿಸಲು ನನ್ನ ಕೈಯಲ್ಲಿ ಆದ ಸಹಾಯ ಮಾಡುವೆ" ಎಂದು ಹೇಳಿದರು.

ಕೇವಲ ನನ್ನ ತೀರ್ಮಾನವಲ್ಲ

ಕೇವಲ ನನ್ನ ತೀರ್ಮಾನವಲ್ಲ

"ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಕೇವಲ ನನ್ನ ಒಬ್ಬಳ ತೀರ್ಮಾನವಲ್ಲ. ಜನರಿಂದ ಸ್ಪರ್ಧಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಪಕ್ಷ ಮೊದಲು ಈ ಕುರಿತು ತೀರ್ಮಾನ ಕೈಗೊಳ್ಳಬೇಕು. ಪಕ್ಷ, ಕೋರ್ ಕಮಿಟಿ, ಹೈಕಮಾಂಡ್ ಈ ಕುರಿತು ತೀರ್ಮಾನ ಮಾಡಬೇಕು. ನಾನು ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿ ಜನರಿಗೆ ಸಹಾಯ ಮಾಡುತ್ತಿಲ್ಲ" ಎಂದು ಶ್ರದ್ಧಾ ಶೆಟ್ಟರ್ ಸ್ಪಷ್ಟಪಡಿಸಿದರು.

ಯಾರ ಜೊತೆಗೂ ನಾನು ಚರ್ಚೆ ಮಾಡಿಲ್ಲ

ಯಾರ ಜೊತೆಗೂ ನಾನು ಚರ್ಚೆ ಮಾಡಿಲ್ಲ

"ಚುನಾವಣೆಗೆ ಸ್ಪರ್ಧಿಸುವ ವಿಚಾರದ ಕುರಿತು ನಾನು ಯಾರ ಜೊತೆಗೂ ಮಾತುಕತೆ ನಡೆಸಿಲ್ಲ. ನಮ್ಮ ಕುಟುಂಬ ಯಾವಾಗಲೂ ಜನರ ಜೊತೆ ಇರುತ್ತದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ" ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.

ಶ್ರದ್ಧಾ ಶೆಟ್ಟರ್ ಸಕ್ರಿಯರಾಗಿದ್ದಾರೆ

ಶ್ರದ್ಧಾ ಶೆಟ್ಟರ್ ಸಕ್ರಿಯರಾಗಿದ್ದಾರೆ

ಶ್ರದ್ಧಾ ಶೆಟ್ಟರ್ ಹೆಸರು ಬೆಳಗಾವಿ ಲೋಕಸಭಾ ಉಪ ಚುನಾವಣೆ ವೇಳೆಯಲ್ಲೂ ಕೇಳಿ ಬಂದಿತ್ತು. ಅಂತಿಮವಾಗಿ ಮಂಗಲಾ ಸುರೇಶ್‌ ಅಂಗಡಿ ಟಿಕೆಟ್ ಪಡೆದರು. ಉಪ ಚುನಾವಣೆಯಲ್ಲಿ ಗೆದ್ದು ಬೆಳಗಾವಿ ಸಂಸದರಾಗಿದ್ದಾರೆ. ಶ್ರದ್ಧಾ ಶೆಟ್ಟರ್ ಉಪ ಚುನಾವಣೆ ಘೋಷಣೆಯಾದ ಬಳಿಕ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಕ್ಷೇತ್ರದಲ್ಲಿ ಸಂಚಾರ ಮಾಡಿ ಜನರನ್ನು ಭೇಟಿಯಾಗಿದ್ದರು. ಜನರ ಜೊತೆ ಉತ್ತಮ ಒಡನಾಟವನ್ನು ಅವರು ಹೊಂದಿದ್ದಾರೆ.

ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಯ ಪ್ರಭಾವಿ ನಾಯಕಿ. 2018ರ ಚುನಾವಣೆಯಲ್ಲಿ 102,040 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಎದುರಾಳಿಯಾಗಿದ್ದ ಬಿಜೆಪಿಯ ಸಂಜಯ್ ಬಿ. ಪಾಟೀಲ್ 50,316 ಮತಗಳನ್ನು ಪಡೆದಿದ್ದರು.

English summary
Shraddha Shetter Daughter of late Suresh Angadi may contest for 2023 Karnataka assembly elections against Congress MLA Lakshmi Hebbalkar at Belagavi rural assembly seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X