ಆರ್‌ಎಸ್‌ಎಸ್‌ನವರು ಫೈವ್ ಸ್ಟಾರ್ ಹೊಟೇಲ್‌ನಲ್ಲಿರಲ್ಲ, ಅವರು ತ್ಯಾಗಜೀವಿಗಳು: ಸಚಿವ ಮುರುಗೇಶ್ ನಿರಾಣಿ
ಬೆಳಗಾವಿ, ಜೂ. 1: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೇ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ತಮ್ಮನ್ನೇ ತಾವು ದೇಶಕ್ಕೆ ಸಮರ್ಪಿಸಿಕೊಂಡಿದ್ದಾರೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಹೇಳಿಕೆಗೆ ಪಕ್ಷದ ಹಲವು ಈಗಾಗಲೇ ಉತ್ತರ ನೀಡಿದ್ದಾರೆ. ಆರ್‌ಎಸ್ಎಸ್ ನಲ್ಲಿರುವವರು ಸ್ವಂತಕ್ಕಾಗಿ ಏನೂ ಮಾಡಿಕೊಳ್ಳದೇ ದೇಶಕ್ಕೆ ತ್ಯಾಗ ಮಾಡಿದ್ದಾರೆ. ತಮ್ಮನ್ನೇ ತಾವು ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರೇನು ಫೈವ್ ಸ್ಟಾರ್ ಹೋಟೆಲ್‌ನಲ್ಲಿರಲ್ಲ. ವಿಮಾನದಲ್ಲಿ ಓಡಾಡೋದಿಲ್ಲ. ಸಮಾಜದ ಅತ್ಯಂತ ಕಟ್ಟ ಕಡೆಯ ಮನುಷ್ಯ ಯಾವ ರೀತಿ ಜೀವನ ಮಾಡುತ್ತಾನೋ, ಆ ರೀತಿ ತಮ್ಮ ಜೀವನ ಸಾಗಿಸುತ್ತಾರೆ. ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವವರ ಬಗ್ಗೆ ಬೇರೆಯವರು ಮಾತನಾಡುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನು ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ಅವರು ಏನೇನೋ ಮಾತನಾಡುತ್ತಾರೆ, ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗಲ್ಲ. ನಾವು ದೇಶಕ್ಕಾಗಿ ಏನು ಮಾಡುತ್ತಿದ್ದೇವೆ ಎನ್ನುವುದೇ ಮುಖ್ಯವಾಗಿದೆ ಎಂದರು.

ಬಿಜೆಪಿ ನಡೆಯುತ್ತಿರುವುದು ಆರ್‌ಎಸ್‌ಎಸ್‌ನಿಂದ
ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರುವ ಆರ್‌ಎಸ್ಎಸ್ ಆಶೀರ್ವಾದದಿಂದ ಭಾರತೀಯ ಜನತಾ ಪಕ್ಷ ಮುಂದುವರಿಯುತ್ತಿದೆ. ನಾನು ಒಬ್ಬ ಸ್ವಯಂಸೇವಕ, ಆರ್‌ಎಸ್‌ಎಸ್ ಆಶೀರ್ವಾದದಿಂದ ನಾನು ಕೈಗಾರಿಕಾ ಸಚಿವನಾಗಿದ್ದೇನೆ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯಾಗುತ್ತದೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡೋದು ಸರಿಯಲ್ಲ. ಅದರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿ ತಿಳಿದುಕೊಂಡ ನಂತರ ಮಾತನಾಡಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ
ಕುಟುಂಬ ರಾಜಕಾರಣದ ಬಗ್ಗೆ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಿರಾಣಿ, ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಸ್ಪರ್ಧಿಸಿದರೆ, ಅವತ್ತೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ. ಮೊದಲಿಂದಲೂ ನಾವು ಇಬ್ಬರು ರಾಜಕಾರಣದಲ್ಲಿ ಇದ್ದೇವೆ. ನಿರಾಣಿ ಕುಟುಂಬದ ಮೂರನೇ ವ್ಯಕ್ತಿ ರಾಜಕೀಯಕ್ಕೆ ಬರುವುದಿಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ನಿರಾಣಿ ಕುಟುಂಬದ ಮೂರನೇ ವ್ಯಕ್ತಿಯ ಸ್ಪರ್ಧೆ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು.

ಸಂಗಮೇಶ ನಿರಾಣಿ ಸ್ಪರ್ಧಿಸಲ್ಲ
ಸಹೋದರ ಸಂಗಮೇಶ ನಿರಾಣಿ ಕಳೆದ ನಾಲ್ಕು ವರ್ಷದಿಂದ ಜಮಖಂಡಿಯಲ್ಲಿ ಸಭೆ ಸಮಾರಂಭ ಮಾಡಿಲ್ಲ. ಇದಕ್ಕೆ ನನ್ನನ್ನು ದೂಷಿಸಬಾರದು ಎಂದು ಜಮಖಂಡಿ ಮಾಜಿ ಶಾಸಕರ ಅನುಮತಿ ಪಡೆದು ಹೋಗುತ್ತಿರುವೆ. ನಾನು ನನ್ನ ಸಹೋದರ ಹನುಮಂತ ನಿರಾಣಿ ಹೊರತುಪಡಿಸಿ ನಮ್ಮ ಮನೆಯಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ನನ್ನ ಮಾತುಕೇಳದೇ ನಮ್ಮ ಕುಟುಂಬದವರು ರಾಜಕೀಯ ಪ್ರವೇಶಿಸಿದರೆ, ನಾನು ರಾಜೀನಾಮೆ ಕೊಡುತ್ತೇನೆ. ಪ್ರಧಾನಮಂತ್ರಿ ಹೇಳಿದ್ದನ್ನ ನಾನು ಪಾಲಿಸುತ್ತೇನೆ. ಮೊದಲಿನಿಂದಲೂ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾವು ಮುಂದೊರೆಯುತ್ತಿದ್ದೇವೆ. ನೂರಕ್ಕೆ ನೂರರಷ್ಟು ಮೂರನೆಯವರು ರಾಜಕೀಯಕ್ಕೆ ಬರುವುದಿಲ್ಲ ಎಂದು ನಿರಾಣಿ ಹೇಳಿದರು.

ವಿಜಯೇಂದ್ರ ಒಳ್ಳೆಯ ನಾಯಕನಾಗುತ್ತಾರೆ
ಯಡಿಯೂರಪ್ಪ ಮಗ ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿ, ನಾವು ಕಳುಹಿಸಿದ ಹೆಸರುಗಳಲ್ಲಿ ಪರಿಷತ್ ಗೆ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಕೋರ್ ಕಮಿಟಿ ಕಳುಹಿಸಿದ ಹೆಸರುಗಳನ್ನೇ ಹೈಕಮಾಂಡ್ ಅಂತಿಮ ಮಾಡಿದೆ. ರಾಜ್ಯದಿಂದ 20 ಜನರ ಹೆಸರು ಕಳುಹಿಸಿದ್ದೆವು. ಇದರಲ್ಲಿ ನಾಲ್ಕು ಜನರನ್ನ ಹೈಕಮಾಂಡ್ ಆಯ್ಕೆ ಮಾಡಿದೆ. ಎಲ್ಲಾ ರೀತಿಯ ವಿಭಾಗ, ಜಾತಿ ಆಧಾರದ ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗಿದೆ. ವಿಜಯೇಂದ್ರಗೆ ಉತ್ತಮ ಭವಿಷ್ಯ ಇದೆ. ಬರುವಂತಹ ದಿನಗಳಲ್ಲಿ ವಿಜಯೇಂದ್ರ ಒಳ್ಳೆಯ ನಾಯಕನಾಗಿ ಹೊರಬರುತ್ತಾನೆ. ವಿಜಯೇಂದ್ರಗೆ ಯಡಿಯೂರಪ್ಪ, ಸಂಘಪರಿವಾರ ಸೇರಿ ಪಕ್ಷದ ಹಿರಿಯರ ಆಶೀರ್ವಾದವಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುವಕನಾಗಿ ರಾಜ್ಯದ ತುಂಬಾ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವನಿಗೆ ರಾಜಕೀಯ ಭವಿಷ್ಯವಿದೆ ಎಂದರು.
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications