ಬೆಳಗಾವಿಯ ಈ ಪ್ರಸಿದ್ಧ ದೇವಾಲಯಗಳಿಗೆ ಇನ್ನೂ ಒಂದು ತಿಂಗಳು ನಿರ್ಬಂಧ

ಬೆಳಗಾವಿ, ಸೆಪ್ಟೆಂಬರ್ 1: ಈಗಾಗಲೇ ಅನ್ ಲಾಕ್ 4.0 ಘೋಷಿಸಲಾಗಿದ್ದು, ಕೆಲವು ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇದಾಗ್ಯೂ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಬೆಳಗಾವಿ ‌ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳಲ್ಲಿ ಇನ್ನೂ ಒಂದು ತಿಂಗಳು ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

Recommended Video

      CSK ತಂಡಕ್ಕೆ ಮತ್ತೊಂದು ಹೊಡೆತ | Oneindia Kannada

      ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ, ಜೋಗುಳಬಾವಿ ಸತ್ತೆಮ್ಮದೇವಿ ಹಾಗೂ ರಾಯಭಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನ ಸೆ. 30ರವರೆಗೆ ಬಂದ್ ಆಗಿರಲಿದೆ.

      ಈ ಮೂರು ದೇವಸ್ಥಾನಗಳಿಗೆ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ದೇವಸ್ಥಾನ ಆರಂಭವಾದರೆ ಸಹಜವಾಗಿಯೇ ಭಕ್ತರು ಅಲ್ಲಿಂದ ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ‌ಜಿಲ್ಲಾಡಳಿತ ಮೂರು ದೇವಸ್ಥಾನಗಳಿಗೆ ಸೆಪ್ಟೆಂಬರ್ 30ರವರೆಗೆ ಸಾರ್ವಜನಿಕ ದರ್ಶನ ನಿಷೇಧಿಸಿದೆ. ಈ ಮೂರು ದೇವಸ್ಥಾನಗಳು ಮಾರ್ಚ್ 18 ರಿಂದ ಬಂದ್ ಆಗಿವೆ.

      Belagavi: Restrictions On Temples Continues Till This Month End

      ಕೋಟಿ ಕೋಟಿ ನಷ್ಟ: ಸವದತ್ತಿಯ ರೇಣುಕಾದೇವಿ ದೇವಸ್ಥಾನದಲ್ಲಿ ವರ್ಷದಲ್ಲಿ ನಾಲ್ಕು ‌ಜಾತ್ರೆ ನಡೆಯುತ್ತದೆ. ಕರ್ನಾಟಕ ‌ಸೇರಿದಂತೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಭಕ್ತರ ‌ಪ್ರವೇಶ ನಿರಾಕರಣೆ ಕಾರಣ ಭಕ್ತರಿಂದ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂಪಾಯಿ ‌ಆದಾಯಕ್ಕೆ ಹೊಡೆತ ಬಿದ್ದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+