ಟ್ರಾಫಿಕ್‌ ರೂಲ್ಸ್‌ ಬ್ರೇಕ್‌: ದಂಡ ಕಟ್ಟಿಸಿಕೊಂಡ ಹಣವನ್ನು ವಿದ್ಯಾರ್ಥಿಗೆ ವಾಪಾಸ್‌ ನೀಡಿದ ಮಹಿಳಾ ಪಿಎಸ್‌ಐ-ಕಾರಣ ಏನು?

ಬೆಳಗಾವಿ, ಜುಲೈ, 25: ಟ್ರಾಫಿಕ್ ಪೊಲೀಸರಿಗೆ ದಂಡ ಪಾವತಿಸಲು ಹಣವಿಲ್ಲದೇ ಪರದಾಡಿ ಕಣ್ಣೀರು ಹಾಕಿದ ವಿದ್ಯಾರ್ಥಿಗೆ ಸಮಾಧಾನ ಮಾಡಿ, ಹಿರಿಯ ಸಹೋದರಿಯ ರೀತಿ ಅಪ್ಪುಗೆ ನೀಡಿ ಸಂತೈಸಿದ ಮಹಿಳಾ ಪಿಎಸ್‌ಐ ನಡೆಗೆ ಭಾರೀ ಮೆಚ್ಚುಗೆ ವ್ತಕ್ತವಾಗಿದೆ.

ಬಾಗಲಕೋಟ ಜಿಲ್ಲೆಯ ಇಲಕಲ್ ನಗರದಲ್ಲಿ ತ್ರಿಬಲ್ ರೈಡಿಂಗ್ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ತಡೆಹಿಡಿದು ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ ಎಂಬುವವರು ದಂಡ ಹಾಕಿದ್ದರು. ಆದರೆ ದಂಡ ಪಾವತಿಗೆ ಹಣವಿಲ್ಲದೆ, ತನ್ನ ಕಾಲೇಜು ಶುಲ್ಕ ಪಾವತಿಗಾಗಿ ಇಟ್ಟುಕೊಂಡಿದ್ದ ಹಣ ನೀಡಿದ ಬಾಲಕನ ಪರಿಸ್ಥಿತಿಗೆ ಮರುಗಿ‌ ಮಹಿಳಾ ಪಿಎಸ್‌ಐ ಆತನಿಗೆ ಕ್ಷಮಾಪಣೆ ಮಾಡಿದ್ದಾರೆ.

PSI returned the fine money to student in Ilkal What is the reason

ಆತ ಕಾಲೇಜು ಶುಲ್ಕಕ್ಕಾಗಿ ಇಟ್ಟುಕೊಂಡಿದ್ದ ಹಣ ದಂಡವಾಗಿ ನೀಡುತ್ತಿರುವ ಬಗ್ಗೆ ಖಾತರಿ ಮಾಡಿಕೊಂಡು ಪಿಎಸ್‌ಐ ಮಮ್ಮಲ‌ ಮರುಗಿದ್ದು, ದಂಡದ ಹಣ ವಾಪಸ್ ಕೊಟ್ಟು, ಸಂತೈಸಿ ಕಳಿಸಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಇನ್ನು ಮಕ್ಕಳು, ಯುವಕರು, ನಾಗರಿಕರು ಸಂಚಾರ ನಿಯಮಗಳನ್ನು ಮೀರಬಾರದು. ಜೊತೆಗೆ ಪೊಲೀಸರು ಸಹ ಸಂದರ್ಭಕ್ಕೆ ಅನುಸಾರವಾಗಿ ಜನತೆಯೊಂದಿಗೆ ಮಾನವೀಯತೆ ಮರೆಯಬೇಕು ಎಂಬ ಪಾಠ ಮಾಡಿದ ಘಟನೆ ನಡೆದಿದೆ.

ಈ ರೈಲು ಮಾರ್ಗ ಯೋಜನೆ ಪ್ರಸ್ತಾಪಿಸಿಲ್ಲ: ಈ ಹಿಂದೆ ಎಲ್ಲ ಬಜೆಟ್‌ಗಳಲ್ಲಿ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ಬೆರಳೆಣಿಕೆಯಷ್ಟು ಅಂಶಗಳಾದರೂ ಇರುತ್ತಿದ್ದವು. ಆದರೆ, ಈ ಬಾರಿಯದ್ದು ಕನ್ನಡಿಗರ ಪಾಲಿಗೆ ಕರಾಳ ಬಜೆಟ್‌ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಚಿವ ಹೆಚ್.ಆಂಜನೇಯ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಕಾರಣಕ್ಕೆ ಅಸೂಯೆಗೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳ ಸ್ಥಗಿತಕ್ಕೆ ಮುಂದಾಗಿದೆ. ದ್ವೇಷದ ರಾಜಕಾರಣಕ್ಕೆ ಬಜೆಟ್ ಅನ್ನು ಬಳಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆ ಮುನ್ನ ನಿರ್ಮಲಾ ಸೀತರಾಮನ್ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂಪಾಯಿ ಬಿಡುಗಡೆಗೆ ಯಾವುದೇ ರೀತಿ ಆಶಾಭಾವನೆ ಮೂಡಿಸದಿರುವುದು ವಂಚನೆ ನಡೆ ಆಗಿದೆ. ದಾವಣಗೆರೆ-ತುಮಕೂರು ರೈಲು ಮಾರ್ಗ, ಕೈಗಾರಿಕೆಗಳ ಸ್ಥಾಪನೆ, ಭದ್ರಾ ಮೇಲ್ದಂಡೆ ಯೋಜನೆ ಹೀಗೆ ಅನೇಕ ಯೋಜನೆಗಳಿಗೆ ಈ ಬಜೆಟ್ ಉತ್ತರ ಕೊಡಲಿದೆ ಎಂಬ ನಿರೀಕ್ಷೆ ಹುಸಿ ಆಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+