ಪಬ್ಜಿಯಿಂದ ಆರಂಭವಾದ ಪ್ರೇಮ, ಬ್ಲಾಕ್‌ಮೇಲ್, ಬಂಧನ

ಬೆಳಗಾವಿ, ಜುಲೈ 25: ಪಬ್ಜಿ ಆಟದ ಮೂಲಕ ಪರಿಚಯವಾಗಿ, ತಾನು ದೊಡ್ಡ ಉದ್ಯೋಗದಲ್ಲಿದ್ದೇನೆಂದು ಯುವತಿಯನ್ನು ನಂಬಿಸಿ ವಂಚಿಸಿದ ಆರೋಪದ ಮೇಲೆ ಗುಜರಾತ್ ಮೂಲದ ಸತೀಶ ಕನ್ಸಾರಾ ಎಂಬಾತನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಈಚೆಗೆ ಪಬ್ಜಿ ಆಟ ಆಡುವಾಗ ಸತೀಶ್ ಬೆಳಗಾವಿ ಯುವತಿಯ ಪರಿಚಯ ಮಾಡಿಕೊಂಡಿದ್ದ. ಸ್ವಲ್ಪ ದಿನಗಳ ನಂತರ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡಿದ್ದರು.

ಪರಿಚಯ ಪ್ರೇಮದವರೆಗೂ ತಲುಪಿತ್ತು. ಸತೀಶ್, ತಾನು ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ತಿಂಗಳಿಗೆ 3 ಲಕ್ಷ ಸಂಬಳ ಪಡೆಯುವುದಾಗಿ ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದ. ಯುವತಿಯನ್ನು ಮುಂಬೈಗೆ ಕರೆಸಿ ಎರಡು ದಿನ ಲಾಡ್ಜ್ ನಲ್ಲಿ ವಾಸ್ತವ್ಯ ಕೂಡ ಮಾಡಿದ್ದರು.

police arrested a man for cheating woman who introduced by pubji game

ಈ ವೇಳೆ ಯುವತಿಯ ಜತೆಗೆ ತೆಗೆಸಿಕೊಂಡಿದ್ದ ಫೋಟೊ, ವಿಡಿಯೋಗಳನ್ನು ಮುಂದಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದ. ನೊಂದ ಯುವತಿಯು ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದು, ದೂರನ್ನಾಧರಿಸಿ ಬೆಳಗಾವಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+