ಫೆ. 14ರಿಂದ ಬೆಳಗಾವಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭ
ಬೆಂಗಳೂರು, ಫೆಬ್ರವರಿ 8: ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕೇಂದ್ರವು ಅಂಚೆ ಇಲಾಖೆ ಸಹಯೋಗದೊಂದಿಗೆ ಬೆಳಗಾವಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸುತ್ತಿದೆ.
ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರವು ಇಲ್ಲಿನ ರೈಲ್ವೇ ಸ್ಟೇಷನ್ ಬಳಿಯಲ್ಲಿರುವ ಕೇಂದ್ರ ಅಂಚೆ ಕಚೇರಿಯಲ್ಲಿ ಇದೇ ಫೆಬ್ರವರಿ 14ರಿಂದ ಕಾರ್ಯಾರಂಭ ಆರಂಭಿಸಲಿದೆ. ಫೆಬ್ರವರಿ 12ರಿಂದ ದಿನಕ್ಕೆ 50 ಸಂದರ್ಶನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಪ್ರಾದೇಶಿಕ ಪಾಸ್ಪೋರ್ಟ್ ಆಯುಕ್ತ ಭರತ್ ಕುಮಾರ್ ಕುತಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕ ಮುಂಗಡ ಸಂದರ್ಶನವನ್ನೂ ಪಡೆದುಕೊಳ್ಳಬಹುದು. ಮತ್ತು ಅರ್ಜಿಯ ಪ್ರಕ್ರಿಯೆಗಾಗಿ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದ್ದಾರೆ.













Click it and Unblock the Notifications