ಗೋಕಾಕ್ ನಲ್ಲಿ ಬೃಹತ್ ಬಂಡೆ ಉರುಳುವ ಭೀತಿ; ಇಂದಿನಿಂದ ಆಪರೇಷನ್ ಬಂಡೆ

Recommended Video

      Heavy rain in Gokak has caused the rocks to fall from Mallikarjuna Hill | Oneindia Kannada

      ಬೆಳಗಾವಿ, ಅಕ್ಟೋಬರ್ 23: ಬೆಳಗಾವಿಯಲ್ಲಿ ಮಳೆ ಮುಂದುವರೆದಿದೆ. ಗೋಕಾಕ್ ನಲ್ಲಿ ಭಾರೀ ಮಳೆಯಿಂದಾಗಿ ಮಲ್ಲಿಕಾರ್ಜುನ ಗುಡ್ಡದಲ್ಲಿನ ಬಂಡೆಗಳೂ ಉರುಳುತ್ತಿರುವುದು ಮತ್ತೊಂದು ಸಮಸ್ಯೆ ಉದ್ಭವಿಸುವಂತೆ ಮಾಡುತ್ತಿದೆ.

      ಗುಡ್ಡದ ಬೃಹತ್ ಬಂಡೆಗಳು ಬೀಳುವ ಹಂತದಲ್ಲಿದ್ದು, ಇದನ್ನು ತಡೆಯಲು ಇಂದಿನಿಂದ ಆಪರೇಷನ್ ಬಂಡೆ ಕಾರ್ಯಾಚರಣೆ ಆರಂಭಿಸಲಾಗಿದೆ. ಎನ್ ಡಿಆರ್ ಎಫ್, ನಗರಸಭೆ, ಸತೀಶ ಜಾರಕಿಹೊಳಿ ಫೌಂಡೇಶನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕಾಗೇ ಪುಣೆಯಿಂದ 25 ಜನರ NDRF ತಂಡ ಗೋಕಾಕ್ ನಗರಕ್ಕೆ ಆಗಮಿಸಿದೆ.

      ಭಾರೀ ಮಳೆಯಿಂದಾಗಿ ಮಲ್ಲಿಕಾರ್ಜುನ ಬೆಟ್ಟದಲ್ಲಿ ಇರುವ‌ ಎರಡು ಬೃಹತ್ ಬಂಡೆಗಳು ಕುಸಿದು ಬೀಳುವ ಭೀತಿ ಎದುರಾಗಿದೆ. ಹಿಂದಿನ ಬಂಡೆ ಕುಸಿದು ಇನ್ನೊಂದು ಬಂಡೆಯ ಮೇಲೆ ಭಾರ ಏರ್ಪಟ್ಟಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಉರುಳಬಹುದಾಗಿದೆ.

      Operation Rock Started In Gokak To Clear Heavy Rocks

      ಮಳೆಯಿಂದಾಗಿ ಬಂಡೆ ಕೆಳಗಿನ ಮಣ್ಣು ತೇವಗೊಂಡು ಕುಸಿದಿದೆ. ಭಾರದಿಂದ 10 ಅಡಿಯಷ್ಟು ಬೃಹತ್ ಬಂಡೆ‌ ಕುಸಿದೆ. ಒಂದು ಬಂಡೆ ಸುಮಾರು 211 ಟನ್ ಇದ್ದು, ಮತ್ತೊಂದು 110 ಟನ್ ಇರಬಹುದೆಂದು ಅಂದಾಜಿಸಲಾಗಿದೆ.

      ಇವು ಉರುಳಿದರೆ ಸಮಸ್ಯೆಯಾಗುವುದರಿಂದ ಇಳಕಲ್, ಕೊಲ್ಲಾಪುರದಲ್ಲಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡೋ ಕಾರ್ಮಿಕರನ್ನು ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿದೆ. ಆಪರೇಷನ್ ಬಂಡೆ ಹಿನ್ನೆಲೆ ಸಿದ್ದೇಶ್ವರ ಓಣಿ, ಮರಾಠಿ ಗಲ್ಲಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರನ್ನೂ ಮನೆ ಖಾಲಿ ಮಾಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+