ಬೆಳಗಾವಿ : ಪೆಟ್ರೋಲಿಯಂ ಟ್ಯಾಂಕರ್‌ಗೆ ಬೆಂಕಿ
ಬೆಳಗಾವಿ, ಜ.10 : ರೈಲಿನ ಬೋಗಿಯಿಂದ ಡೀಸೆಲ್‌ಅನ್ನು ಟ್ಯಾಂಕರ್‌ಗೆ ತುಂಬುವಾಗ ಬೆಂಕಿಹೊತ್ತಿಕೊಂಡ ಘಟನೆ ಬೆಳಗಾವಿಯ ದಾಸೂರು ಗ್ರಾಮದ ರೈಲು ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಮೂರು ಅಗ್ನಿ ಶಾಮಕ ದಳದ ವಾಹನಗಳು ಕಾರ್ಯಾರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಸುಮಾರು 70,000 ಲೀಟರ್ ಡೀಸೆಲ್ ಬೆಂಕಿಗಾಹುತಿಯಾಗಿದೆ. ರೈಲಿನಲ್ಲಿ ಬಂದ ಡೀಸೆಲ್‌ಅನ್ನು ಟ್ಯಾಂಕರ್‌ಗೆ ತುಂಬುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿದೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಬೆಂಕಿಯ ಕೆನ್ನಾಗಿಲಿಗೆ ಹೆಚ್ಚಾದಂತೆ ಗ್ರಾಮದ ಸುತ್ತಮುತ್ತಲೂ ದಟ್ಟವಾದ ಕಪ್ಪುಹೊಗೆ ಆವರಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಗೆ ಬರುವ ರೈಲು ಮತ್ತು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಟ್ಯಾಂಕರ್ ಸ್ಫೋಟಗೊಳ್ಳುವ ಭೀತಿಯಿಂದ ಸ್ಥಳೀಯರು ಆತಂಕಗೊಂಡಿದ್ದರು. [ಚಿತ್ರ ಕೃಪೆ : http://allaboutbelgaum.com/]
ಮೂರು ಅಗ್ನಿಶಾಮಕ ವಾಹನಗಳು ಸತತವಾಗಿ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಗೆ ನಿಖವವಾದ ಕಾರಣ ತಿಳಿದುಬಂದಿಲ್ಲ. ಬೆಂಕಿ ಹೊತ್ತಿಕೊಂಡ ಟ್ಯಾಂಕರ್ ಸತತ ಎರಡು ಗಂಟೆ ಹೊತ್ತಿ ಉರಿದಿದ್ದು, ಗ್ರಾಮದ ಸುತ್ತಮುತ್ತಲೂ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.
Fire at oil depot at Desur. #Belagavi #belgaum #fire pic.twitter.com/YMlWh7VyTp
— All About Belgaum (@allaboutbelgaum) January 10, 2015 ಘಟನೆಯಿಂದಾಗಿ ರಾಣಿಚೆನ್ನಮ್ಮ ಎಕ್ಸ್‌ಪ್ರೆಸ್ ಸೇರಿದಂತೆ ಇತರ ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಬೆಳಗಾವಿ-ಖಾನಾಪುರ ನಡುವಿನ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು.












Click it and Unblock the Notifications