ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಸಚಿವರ ಹೆಸರಿಲ್ಲ!

ಬೆಳಗಾವಿ, ನವೆಂಬರ್ 9 : ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಸದರಾದ ಸುರೇಶ್ ಅಂಗಡಿ, ಸಚಿವ ಅನಂತ ಕುಮಾರ್ ಹೆಗಡೆ ಅವರ ಹೆಸರನ್ನು ಕೈ ಬಿಡಲಾಗಿದೆ. ಹೆಸರನ್ನು ಸೇರಿಸಬೇಡಿ ಎಂದು ಇಬ್ಬರೂ ಬಿಜೆಪಿ ನಾಯಕರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.

ಮೊದಲು ಕೇಂದ್ರ ಕೌಶಾಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಲ್ಲಿ ಸೇರಿಸಿ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿತ್ತು.

In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

No invitation for minister to Tipu Jayanti programme

ನವೆಂಬರ್ 10ರ ಶುಕ್ರವಾರ ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಚಿವರು, ಬೆಳಗಾವಿ ಸಂಸದರನ್ನು ಆಹ್ವಾನಿಸಲಾಗಿತ್ತು.

ಮೊದಲು ಮುದ್ರಿಸಿದ ಪತ್ರಿಕೆಯಲ್ಲಿ ಸಚಿವರು ಮತ್ತು ಸಂಸದರ ಹೆಸರು ಸೇರಿಸಲಾಗಿತ್ತು. ತಮ್ಮ ಹೆಸರನ್ನು ಸೇರಿಸಿಬೇಡಿ ಎಂದು ಇಬ್ಬರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಹೆಸರು ಮುದ್ರಿಸಬೇಡಿ ಎಂದು ಹೇಳಿತ್ತು.

ಆದ್ದರಿಂದ, ಜಿಲ್ಲಾಡಳಿತ ಅನಂತ ಕುಮಾರ್ ಹೆಗಡೆ ಮತ್ತು ಸುರೇಶ್ ಅಂಗಡಿ ಅವರ ಹೆಸರನ್ನು ಕೈ ಬಿಟ್ಟು ಆಮಂತ್ರಣ ಪತ್ರಿಕೆಯನ್ನು ಪುನಃ ಮುದ್ರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+