'ಸಿದ್ದರಾಮಯ್ಯ-ಕುಮಾರಸ್ವಾಮಿ ಮಧ್ಯೆ ಯಾವುದೇ ಜಟಾಪಟಿಯಿಲ್ಲ'
Recommended Video

ಬೆಳಗಾವಿ, ಜೂನ್.18: ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್ ಮಂಡನೆ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಸತೀಶ ಜಾರಕಿಹೊಳಿ ಈ ಹಿಂದಿನ ವಾಡಿಕೆಯಂತೆ ಹೊಸ ಬಜೆಟ್ ಮಂಡನೆಯಾಗಲಿದೆ.
ಈ ಹಿಂದೆ ಸಿದ್ದರಾಮಯ್ಯ ಅವರೇ ಪ್ರತ್ಯೇಕ ಬಜೆಟ್ ಮಂಡಿಸಿದ್ದಾರೆ. ಅದೇ ರೀತಿ ಎಚ್.ಡಿ.ಕೆ ಮಾಡುತ್ತಿದ್ದಾರೆ. ಈಗಾಗಲೇ ಹೊಸ ಸರ್ಕಾರ, ಹೊಸ ಬಜೆಟ್ ಅಂತ ಡಿಸಿಎಂ ಹೇಳಿದ್ದಾರೆ. ಹೊಸ ಬಜೆಟ್ ಮಾಡುವುದರಿಂದ ಏನು ತಪ್ಪಿಲ್ಲ.
ಇದು ನಮ್ಮದೇ ಸಮ್ಮಿಶ್ರ ಸರ್ಕಾರ. ಸಿದ್ದರಾಮಯ್ಯ ಅವರು ತಮ್ಮ ಸಲಹೆ ಕೊಟ್ಟಿದ್ದಾರೆ. ಅದರ ಹೊರತಾಗಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆ ಯಾವುದೇ ಜಟಾಪಟಿಯಿಲ್ಲ. ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿ ಚರ್ಚಿಸಿ ಬಜೆಟ್ ಮಂಡಿಸಿದರೆ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡು ವರ್ಷದ ಬಳಿಕ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈಗ ಖಾಲಿ ಇರುವ ಸಚಿವ ಸ್ಥಾನ ಆದಷ್ಟು ಬೇಗ ಭರ್ತಿ ಮಾಡಲಾಗುತ್ತದೆ. ಹಾಗೆಯೇ ಬೆಂಗಳೂರಿನಲ್ಲಿ ನನ್ನ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ.
ಮಾನವ ಬಂದುತ್ವ ವೇದಿಕೆಯಿಂದ ನಾಳೆ ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದರಲ್ಲಿ ಬುದ್ಧಿ ಜೀವಿಗಳು, ಪ್ರಗತಿಪರರು ನಮಗೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಅದು ತಪ್ಪಲ್ಲ ಎಂದು ತಿಳಿಸಿದರು.
ಗೌರಿ ಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಾವು ಸಾಕಷ್ಟು ಜಾಗೃತಿಯಲ್ಲಿ ಇದ್ದೇವೆ. ಕೆಲ ವಿಚಾರವಾದಿಗಳಿಗೆ ಸೂಕ್ತ ಭದ್ರತೆ ನೀಡಬೇಕೆಂದು ಹೇಳಿದ್ದೇವೆ ಎಂದು ತಿಳಿಸಿದರು.
ಆದರೆ ನಾನು ಯಾವುದೇ ಭದ್ರತೆ ಪಡೆಯುವುದಿಲ್ಲ. ನನ್ನ ವಿರುದ್ಧ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಾಸ್ತವವನ್ನು ಜನರ ಮಧ್ಯೆ ಮಾಧ್ಯಮಗಳ ಮೂಲಕ ಬಿಚ್ಚಿಡುತ್ತೇವೆ ಎಂದರು.












Click it and Unblock the Notifications