ಬೆಳಗಾವಿ: ಯಲ್ಲಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುರುಳರು
ಬೆಳಗಾವಿ, ಅಕ್ಟೋಬರ್ 30: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಯಲ್ಲಮ್ಮ ದೇವಿ ಮೂರ್ತಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಮೂರ್ತಿ ಮೇಲೆ ಇದ್ದ ಬಂಗಾರ, ಬೆಳ್ಳಿ ಹಾಗೂ ತಾಮ್ರದ ಮೂರ್ತಿ ಸೇರಿದಂತೆ ಸುಮಾರು 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಈ ಘಟನೆಯಿಂದಾಗಿ ನಿಡಗುಂದಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ಯಲ್ಲಮ್ಮ ದೇವಿಗೆ ಪೂಜಾ ಮಾಡುವುದರಲ್ಲಿ ಅರ್ಚಕ ಮಾರುತಿ ಕಲ್ಲಾಪ್ಪ ಭಂಡಾರಿ ಹಾಗೂ ಅವರ ಸಂಬಂಧಿಕರಲ್ಲಿ ಭಿನ್ನಾಭಿಪ್ರಾಯಗಳು ಇದ್ದವು. ಇದರಿಂದ ಇವರ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications