ಬೆಳಗಾವಿ : ಚಿಕ್ಕಪ್ಪನ ರುಂಡ ಕಡಿದು ಪೊಲೀಸರಿಗೆ ಕೊಟ್ಟ

ಬೆಳಗಾವಿ, ಮೇ 15 : ಆಸ್ತಿ ವಿವಾದದ ಹಿನ್ನಲೆಯಲ್ಲಿ ಯುವಕನೊಬ್ಬ ಚಿಕ್ಕಪ್ಪನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿಕ್ಕಪ್ಪನ ರುಂಡವನ್ನು ಕತ್ತಿರಿಸಿ ಅದನ್ನು ತಂದು ಪೊಲೀಸರಿಗೆ ನೀಡಿ ಯುವಕ ಶರಣಾಗತನಾಗಿದ್ದಾನೆ.

ಬೆಳಗಾವಿ ನಗರದ ವಡಗಾವಿ ಪಾಟೀಲ ಗಲ್ಲಿಯಲ್ಲಿ ಬುಧವಾರ ಸಂಜೆ ಈ ಕೊಲೆ ನಡೆದಿದೆ. ಕೊಲೆಯಾದವನನ್ನು ಯಳ್ಳೂರು ಸುಭಾಷ ಗಲ್ಲಿಯ ರಾಜಾರಾಮ್‌ ಮಲ್ಲಪ್ಪ ಪಾಟೀಲ (50) ಎಂದು ಗುರುತಿಸಲಾಗಿದೆ. ಇದವರ ಸಹೋದರನ ಪುತ್ರ ವಿಕಾಸ ವಿಜಯ (ವಿಕ್ಕಿ) (22) ಚಿಕ್ಕಪ್ಪನನ್ನು ಕೊಂದು ಶರಣಾಗತನಾಗಿದ್ದಾನೆ.

murder

ಕೊಲೆ ಮಾಡಿರುವ ವಿಕ್ಕಿಯ ತಂದೆ ತಂದೆ ಹಾಗೂ ಚಿಕ್ಕಪ್ಪ ರಾಜಾರಾಮ್‌ ಪಾಟೀಲ ನಡುವೆ ಕಳೆದ 16 ವರ್ಷಗಳಿಂದ ಆಸ್ತಿ ವಿವಾದವಿತ್ತು. ಇದು ಬಗೆಹರಿದಿರಲಿಲ್ಲ. ಬುಧವಾರ ಸಂಜೆ ಈ ವಿಚಾರದ ಬಗ್ಗೆ ಮಾತನಾಡಲು ರಾಜಾರಾಮ ಅವರು ವಿಕ್ಕಿ ಮನೆಗೆ ಆಗಮಿಸಿದ್ದರು. ಆಗ ವಿಕ್ಕಿ ತಂದೆ ಹಾಗೂ ಚಿಕ್ಕಪ್ಪನ ನಡುವೆ ಜಗಳ ನಡೆದಿದೆ.

ಇದರಿಂದ ಕೋಪಗೊಂಡ ವಿಕ್ಕಿ ಚಿಕ್ಕಪ್ಪನನ್ನು ವಡಗಾವಿಯ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮಚ್ಚಿನಿಂದ ಅವರ ರುಂಡ ಕತ್ತರಿಸಿದ್ದಾನೆ. ನಂತರ ತನ್ನ ಆಟೋದಲ್ಲಿ ಅದನ್ನು ತೆಗೆದುಕೊಂಡು ಬಂದು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ವಿಕ್ಕಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+