Get Updates
Get notified of breaking news, exclusive insights, and must-see stories!

ಕುಡಚಿ ಶಾಸಕ ಪಿ. ರಾಜೀವ ತಾಯಿ ಕೋವಿಡ್‌ಗೆ ಬಲಿ

ಬೆಳಗಾವಿ, ಮೇ 20; ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ ತಾಯಿ ವಿಧಿವಶರಾಗಿದ್ದಾರೆ. ಕೋವಿಡ್‌ ಸೋಂಕು ತಗುಲಿದ್ದ ಬಳಿಕ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಶಾಸಕ ಪಿ. ರಾಜೀವ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ (72) ಗುರುವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

'ನನ್ನ ಪೂಜ್ಯ ತಾಯಿಯವರು ಕೊರೋನಾ ಸೋಂಕಿನಿಂದ ಇಂದು ಮೃತಪಟ್ಟು ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ. ನಾನು ಸಹ ಅವರ ಪ್ರಾಥಮಿಕ ಸಂಪರ್ಕ ಹೊಂದಿರುವುದರಿಂದ ಯಾರು ನನ್ನನ್ನು ಭೇಟಿಯಾಗಲು ಬರದೆ ಸಂತಾಪ ಸೂಚಿಸಲು ಮನವಿ ಮಾಡುತ್ತೇನೆ' ಎಂದು ಶಾಸಕರು ಫೇಸ್‌ಬುಕ್‌ ಮೂಲಕ ಮಾಹಿತಿ ನೀಡಿದ್ದಾರೆ.

Kudachi BJP MLA P Rajeev Mother Dies Due To Covid

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಅಂತ್ಯ ಸಂಸ್ಕಾರವನ್ನು ಕುಟುಂಬ ಸದಸ್ಯರು ಮಾಡಿದ್ದಾರೆ.

ಭಾವುಕ ಪೋಸ್ಟ್ ಹಾಕಿದ ಶಾಸಕರು; ತಾಯಿಯನ್ನು ಕಳೆದುಕೊಂಡ ಶಾಸಕರು ಫೇಸ್‌ಬುಕ್‌ನಲ್ಲಿ ತಾಯಿ ಜೊತೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಭಾವುಕವಾದ ಪೋಸ್ಟ್ ಹಾಕಿದ್ದಾರೆ.

'ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ'

'ನಾನು, ನನ್ನ ಹೆಂಡತಿ, ಎರಡು ಮಕ್ಕಳು, ಇಬ್ಬರು ಆಪ್ತ ಸಹಾಯಕರು ಕರೊನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯವರು ಸೋಂಕಿಗೆ ಒಳಗಾಗಿದ್ದರಿಂದ ಅವರ ಆರೈಕೆಯಲ್ಲಿ ನಾನೇ ತೊಡಗಿದ್ದರಿಂದ ಮತ್ತು ನನ್ನಕ್ಕ ಹಾಗೂ ಅಕ್ಕನ ಮಗ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿರುವುದರಿಂದ ಯಾರಿಗೂ ತಿಳಿಸದೆ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರವನ್ನು ನೆರವೇರಿಸಿರುತ್ತೇನೆ'

'ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಯಾರೂ ಸಹ ಸಾಂತ್ವನ ಹೇಳುವುದಕ್ಕಾಗಿ ಆಗಮಿಸಬಾರದೆಂದು ವಿನಂತಿಸುತ್ತೇನೆ. ಆದಷ್ಟು ಬೇಗ ನನ್ನ ನನ್ನ ಸಾಮಾಜಿಕ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ' ಎಂದು ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+