ಕಾಗವಾಡ ವಿಧಾನ ಸಭಾ ಕ್ಷೇತ್ರ; ಅದಲು ಬದಲು ನಾಯಕರ ಹಣಾಹಣಿ

ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅನರ್ಹಗೊಂಡಿದ್ದರಿಂದ ಬೆಳಗಾವಿಯ ಕಾಗವಾಡ ವಿಧಾನ ಸಭೆ ಕ್ಷೇತ್ರ ಉಪಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಿದೆ. ಪ್ರಮುಖ ಪಕ್ಷಗಳ ರಾಜಕೀಯ ಮುಖಂಡರು ಅದಲು ಬದಲು ಆಗಿದ್ದರಿಂದ ಕಾಗವಾಡ ವಿಧಾನ ಸಭಾ ಕ್ಷೇತ್ರ ಕುತೂಹಲ ಮೂಡಿಸಿದೆ. ಭರಮಗೌಡ ಕಾಂಗ್ರೆಸ್ ನಿಂದ ಹಾಗೂ ಶ್ರೀಮಂತ ಪಾಟೀಲ ಬಿಜೆಪಿಯಿಂದ ಕಣಕ್ಕಿಳಿದಿರುವುದು ಭಾರೀ ಗಮನ ಸೆಳೆದಿದೆ.

2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶ್ರೀಮಂತ ಪಾಟೀಲ, ಬಿಜೆಪಿಯ ಭರಮಗೌಡ ಕಾಗೆ ವಿರುದ್ಧ ಗೆಲುವು ಸಾಧಿಸಿದ್ದರು. ಇದೀಗ ಇಬ್ಬರೂ ಅದಲು ಬದಲಾಗಿದ್ದು, ಕಾಂಗ್ರೆಸ್-ಬಿಜೆಪಿ ಹಣಾಹಣಿ ಈ ಕ್ಷೇತ್ರದಲ್ಲಿ ಜೋರಾಗಿದೆ.

2018ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಶ್ರೀಮಂತ ಪಾಟೀಲ ಬಿಜೆಪಿ ಅಭ್ಯರ್ಥಿ. "ಬಿಜೆಪಿಯಲ್ಲಿ ನನಗೆ ಮರ್ಯಾದೆ ಇಲ್ಲ. ಪಕ್ಷ ಉಪ ಚುನಾವಣೆ ಟಿಕೆಟ್ ನೀಡುವುದಿಲ್ಲ ಎಂದು ಖಚಿತವಾಗಿ ಬಿಜೆಪಿ ಬಿಟ್ಟೆ, ಅವರ ವಿರುದ್ಧ ಗೆದ್ದೇ ಗೆಲ್ಲುವೆ ಎಂಬ ಹಟ ತೊಟ್ಟು ಬಂದಿರುವ ಭರಮಗೌಡ ಕಾಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶ್ರೀ ಶೈಲ ತುಗಶೆಟ್ಟಿ ಸ್ಪರ್ಧಿಸುತ್ತಿದ್ದಾರೆ.

Kagawada Assembly Constituency By Election 2019

ಕ್ಷೇತ್ರದಲ್ಲಿ ಒಟ್ಟು 1,85,443 ಮತದಾರರಿದ್ದಾರೆ. 89,657 ಮಹಿಳಾ ಮತದಾರರು, 95,786 ಪುರುಷ ಮತದಾರರು ಇದ್ದಾರೆ. 816 ಅಂಚೆ ಮತದಾರರಿದ್ದು, ವಿಕಲ ಚೇತನ ಮತದಾರರು 992 ಇದ್ದು, 3,788
ಯುವ ಮತದಾರರು ಇದ್ದಾರೆ. ಒಟ್ಟು 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 180 ಮತ್ತು ನಗರದಲ್ಲಿ 50, ಒಂದು ಸಖಿ ಮತಗಟ್ಟೆ, ಒಂದು ವಿಕಲಾಂಗಚೇತನರ ಮತಗಟ್ಟೆ ನಿರ್ಮಿಸಲಾಗಿದೆ.

ಜಾತಿವಾರು ಮತದಾರರ ಲೆಕ್ಕಾಚಾರ: ಕ್ಷೇತ್ರದಲ್ಲಿ ವೀರಶೈವ- ಲಿಂಗಾಯತರು ನಿರ್ಣಾಯಕರಾಗಿದ್ದಾರೆ. ಲಿಂಗಾಯತರು -61445, ಎಸ್ ಸಿಎಸ್ ಟಿ 26005, ಕುರುಬರು 23371, ಅಲ್ಪ ಸಂಖ್ಯಾತರು 63087, ಇತರೆ 11535 ಮತದಾರರು ಇದ್ದಾರೆ.

2018ರ ಚುನಾವಣಾ ಫಲಿತಾಂಶ: 2018ರ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ 32,942 ಮತಗಳ ಅಂತರದಿಂದ ರಾಜು ಕಾಗೆಯನ್ನು ಸೋಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+