ಬೆಳಗಾವಿಯಲ್ಲಿ ಮಧ್ಯರಾತ್ರಿ ವೇಳೆ ನಗ್ನ ಯುವತಿಯ ನಗರ ಪ್ರದಕ್ಷಿಣೆ

Recommended Video

      ಬೆಳಗಾವಿಯಲ್ಲಿ ಮಧ್ಯರಾತ್ರಿ ವೇಳೆ ನಗ್ನ ಯುವತಿಯ ನಗರ ಪ್ರದಕ್ಷಿಣೆ

      ಬೆಳಗಾವಿ, ಆಗಸ್ಟ್ 18: ಬೆಳಗಾವಿಯಲ್ಲಿ ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಮಧ್ಯರಾತ್ರಿ ವೇಳೆ ನಗ್ನ ಯುವತಿಯೊಬ್ಬಳು ನಗರಪ್ರದಕ್ಷಿಣೆ ಮಾಡಿದ್ದಾಳೆ. ಬೆಳಗಾವಿ ಕ್ಲಬ್‌ ರಸ್ತೆಯಲ್ಲಿ ಯುವತಿಯೊಬ್ಬಳು ನಗ್ನಳಾಗಿ ಸ್ಕೂಟರ್ ಚಲಾಯಿಸಿದ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

      ಮಂಗಳವಾರ ರಾತ್ರಿ 10.30ರ ಸುಮಾರಿಗೆ ನಗ್ನ ಯುವತಿಯು ಯುವಕನೊಬ್ಬನ ಜೊತೆ ಸ್ಕೂಟರ್ ಏರಿ ಕ್ಲಬ್‌ ರಸ್ತೆ ಬಳಿ ಬಂದು, ಆ ನಂತರ ಯುವಕನನ್ನು ಕೆಳಗಿಳಿಸಿ ತಾನೇ ಸ್ಕೂಟರ್ ಚಲಾಯಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

      Girl Riding Scooter Without Dress In Mid Night At Belagvi

      ನಗರದ ಪ್ರಮುಖ ಬೀದಿಗಳಾದ ಕ್ಲಬ್ ರಸ್ತೆ, ವಿಶ್ವೇಶ್ವರಯ್ಯ ನಗರ, ಹನುಮಾನ್ ನಗರ ಸುತ್ತ ಸುತ್ತಾಡಿ, ಹಿಂಡಲಗಾ ಮಾರ್ಗದತ್ತ ತೆರಳಿ ಕಣ್ಮರೆಯಾದಳು ಎಂದು ಹೇಳಲಾಗುತ್ತಿದೆ.

      ಯುವತಿಯು ಡ್ರಗ್ಸ್ ಸೇವಿಸಿರುವ ಶಂಕೆ ವ್ಯಕ್ತವಾಗುತ್ತಿದೆ. 'ಯುವತಿಯು ಸ್ಥಳೀಯಳಾಗಿರಲಿಕ್ಕಿಲ್ಲ. ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಹೊರರಾಜ್ಯದಿಂದ ಬಂದಿರುವಂತಹ ಯುವತಿ ಆಗಿರಬಹುದು. ಡ್ರಗ್ಸ್ ಸೇವಿಸಿ ಅಥವಾ ಬಾಜಿ ಕಟ್ಟಿದ್ದಕ್ಕೆ ಇಂತಹ ಕೃತ್ಯ ಮಾಡಿರಬಹುದು' ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

      Girl Riding Scooter Without Dress In Mid Night At Belagvi

      ಸ್ಕೂಟರ್ ನ ನೋಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲದ ಕಾರಣ ಯುವತಿ ಯಾರೆಂದು ಸ್ಪಷ್ಟವಾಗಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+