ಬೆಳಗಾವಿ: ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಬೆಳಗಾವಿ, ಜೂನ್.17: ತಮಾಷೆ ಮಾಡಲು ಹೋಗಿ ಗೋಕಾಕ್ ಜಲಪಾತದ ಪ್ರಪಾತಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಘಟಪ್ರಭಾದ ನಿವಾಸಿ ರೆಹಮಾನ್ ಉಸ್ಮಾನ್ ಕಾಜಿ (35) ಮೃತ ದುರ್ದೈವಿ.
ಉಸ್ಮಾನ್ ರಂಜಾನ್ ಇದ್ದ ಪ್ರಯುಕ್ತ ಸ್ನೇಹಿತರ ಜೊತೆ ಗೋಕಾಕ್ ಫಾಲ್ಸ್ ಗೆ ಹೋಗಿದ್ದಾನೆ. ಆದರೆ ತಮಾಷೆ ಮಾಡಲು ಫಾಲ್ಸ್ ನ ಕೆಳಗೆ ಇಳಿದಿದ್ದಾನೆ. ನಂತರ ಫಾಲ್ಸ್ ಸ್ವಲ್ಪ ಕೆಳಗೆ ಕಲ್ಲು ಬಂಡೆ ಹಿಡಿದು ಸ್ನೇಹಿತರ ಜೊತೆ ಮಾತನಾಡುತ್ತಿರುತ್ತಾನೆ. ಬಳಿಕ ಉಸ್ಮಾನ್ ಮೇಲೆ ಎದ್ದು ತಕ್ಷಣ ಕೈ ಜಾರಿ ಜಲಪಾತಕ್ಕೆ ಧುಮುಕಿ ಮೃತಪಟ್ಟಿದ್ದಾನೆ.
ಉಸ್ಮಾನ್ ಕೆಳಗೆ ಬೀಳುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಲ್ನಲ್ಲಿ ಸೆರೆ ಹಿಡಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದಾಜು 200 ಅಡಿ ಆಳವಿರುವ ಗೋಕಾಕ ಜಲಪಾತಕ್ಕೆ ಇಳಿದು ಶವ ಹುಡುಕಲು ಸ್ಥಳೀಯ ಈಜುಗಾರರು ಮುಂದೆ ಬರುತ್ತಿಲ್ಲ. ಇಂತಹ ಆಳಕ್ಕಿಳಿಯಲು ಗೋವಾದ ನುರಿತ ಈಜು ತಜ್ಞರನ್ನು ಕರೆಸಲು ಸ್ಥಳೀಯ ಈಜುಗಾರರು ಸಲಹೆ ನೀಡಿದ್ದಾರೆ.
ಇಂದು ಅಥವಾ ನಾಳೆ ಮೃತದೇಹ ತಾನಾಗಿಯೇ ಹೊರಬರಹುದು ಎಂಬ ನಿರೀಕ್ಷೆಯಲ್ಲಿ ಪೋಲಿಸರು ಇದ್ದಾರೆ. ಮೃತದೇಹದ ಶೋಧ ಕಾರ್ಯ ನಡೆಸದೇ ಕೈಕಟ್ಟಿ ಕುಳಿತ ಗೋಕಾಕ್ ಪೋಲಿಸರ ನಡೆ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications