• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿವಾದ ಎಬ್ಬಿಸಿದ ಕೇಸರಿ ನಿಲುವಂಗಿ, ತಿಲಕ ಇಟ್ಟ ಬಿಷಪ್ ಚಿತ್ರ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಸೆಪ್ಟೆಂಬರ್ 13: ಕೇಸರಿ ಬಣ್ಣದ ನಿಲುವಂಗಿ ತೊಟ್ಟು ತಿಲಕ ಹಚ್ಚಿಕೊಂಡ ಬಿಷಪ್ ಡೆರಿಕ್ ಫರ್ನಾಂಡಿಸ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಹಿಂದೂ ಸ್ವಾಮಿಗಳಂತೆ ಕೇಸರಿ ನಿಲುವಂಗಿ ಧರಿಸಿದ ಬಿಷಪ್ ಅವರ ಹಿಂದೆ ಹಲವರು ಇದ್ದು, ಅವರು ಹಿಂದೂ ಸ್ವಾಮೀಜಿಗಳಾಗಿದ್ದು, ಕೇಸರಿ ಬಟ್ಟೆಯೊಂದಿಗೆ ರುದ್ರಾಕ್ಷಿ ಧರಿಸಿದ್ದಾರೆ. ಇವರೊಂದಿಗೆ ಬಿಷಪ್ ಇರುವ ಚಿತ್ರವೊಂದು ಚರ್ಚೆಗೆ ಕಾರಣವಾಗಿದೆ. ಸೇವಿಯೋ ರೋಡ್ರಿಕ್ ಎಂಬಾತ ಈ ಫೋಟೊಗಳನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ಅವರಿಗೆ ಬೆದರಿಕೆ ಕರೆಗಳೂ ಬರುತ್ತಿರುವುದಾಗಿ ತಿಳಿದುಬಂದಿದೆ.

ಮೇ ಒಂದರಂದು ಬೆಳಗಾವಿಯ ಆರನೇ ಬಿಷಪ್ ಆಗಿ ಡೆರಿಕ್ ಅವರನ್ನು ನೇಮಿಸಲಾಗಿತ್ತು. ಆಗಸ್ಟ್ 29ಕ್ಕೆ ಡೆರಿಕ್ ಅವರು ಬೆಳಗಾವಿಯಿಂದ 28 ಕಿ.ಮೀ. ದೂರದಲ್ಲಿರುವ ದೇಶನೂರ್ ಚರ್ಚಿಗೆ ಭೇಟಿ ನೀಡಿದ್ದ ಸಂದರ್ಭ ಈ ಚಿತ್ರವನ್ನು ತೆಗೆಯಲಾಗಿತ್ತು. ಆದರೆ ಈ ರೀತಿ ಕೇಸರಿ ಬಟ್ಟೆಯಲ್ಲಿ ಅವರು ಕಾಣಿಸಿಕೊಂಡಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಇವರು ಧರ್ಮ ನಿಂದನೆ ಎಸಗಿದ್ದಾರೆ ಎಂದು ಹಲವರು ದೂರಿದರೆ, ಇನ್ನೂ ಹಲವರು, ಹಿಂದೂಗಳನ್ನು ಮತಾಂತರಗೊಳಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ಚರ್ಚ್ ಅನ್ನು ಹಿಂದೆ ವಿರಕ್ತಮಠ ಎಂದು ಕರೆಯಲಾಗುತ್ತಿದ್ದು, ಲಿಂಗಾಯತರೇ ಹೆಚ್ಚಿದ್ದ ಆ ಸ್ಥಳದಲ್ಲಿ ನಲವತ್ತು ವರ್ಷಗಳ ಹಿಂದೆ ಪಾದ್ರಿಗಳು ಅಲ್ಲಿಗೆ ಹೋದಾಗ ಕೇಸರಿ ನಿಲುವಂಗಿಯನ್ನು ಧರಿಸಲು ಆರಂಭಿಸಿದರು. ಹಾಗೆಯೇ ಸಸ್ಯಾಹಾರವನ್ನು ಕೈಗೊಂಡರು. ಇಲ್ಲಿನ ಸಂಸ್ಕೃತಿ ಅಭ್ಯಾಸಗಳನ್ನೇ ಪಾಲಿಸಿದರು. ಆದರೆ ಇದು ಜನರೊಳಗೆ ಒಂದಾಗಲು ಅಷ್ಟೇ ಹೊರತು ಸ್ಥಳೀಯರನ್ನು ಮತಾಂತರಿಸಲು ಅಲ್ಲ ಎಂದು ಹೇಳಿದ್ದಾರೆ ಚರ್ಚ್ ನ ಪಾದ್ರಿ ನೆಲ್ಸನ್ ಪಿಂಟೋ.

ಚರ್ಚ್ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೂ ಈ ಚಿತ್ರ ಹಾಕಿರುವವರಿಗೆ ಬೆದರಿಕೆ ಕರೆಗಳು ಬರುವುದು ಮಾತ್ರ ನಿಂತಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A picture of Bishop Derek Fernandes wearing a saffron colored robe and tilak has caused controversy in belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more