ಕಾಂಗ್ರೆಸ್ ಗೆ ಡ್ಯಾಮೇಜ್ ಆಗುವ ಹೇಳಿಕೆ ನೀಡಿದ ಕೆಪಿಸಿಸಿ ಮಾಜಿ ಸದಸ್ಯ
ಬೆಳಗಾವಿ, ಜನವರಿ 31: ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಣ ಇದ್ದವರಿಗೆ ಮಣೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲುವುದು ಇವರಿಗೆ ಬೇಕಾಗಿಲ್ಲ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ್ ಮುನವಳ್ಳಿ ಅವರು ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಸಚಿವರು ಷಂಡರಿದ್ದಾರಾ? ಇವತ್ತಲ್ಲ ನಾಳೆ ಶಂಕರ ಮುನವಳ್ಳಿ ಹತ್ಯೆ ಆಗುತ್ತದೆ. ಯಾಕಂದ್ರೆ ನನಗೂ ಜೀವ ಬೆದರಿಕೆ ಇದೆ. ನನ್ನ ಹತ್ಯೆಗೆ ಈಗಿನ ನಗರ ಪೊಲೀಸ್ ಆಯುಕ್ತರೇ ಕಾರಣ. ಸತೀಶ ಜಾರಕಿಹೊಳಿ, ಫಿರೋಜ್ ಸೇಠ್ ಬೆಂಬಲಿಗರಿಂದ ಜೀವ ಬೆದರಿಕೆಯಿದೆ ಎಂದರು.

ಹೇಡಿಗಳ ಸರಕಾರದಿಂದ ಅಲ್ಪಸಂಖ್ಯಾತರು ಬದುಕಲು ಸಾಧ್ಯವಾ? ನಮ್ಮವರೇ ಹತ್ಯೆ ಮಾಡಿ ಬೇರೆ ಪಕ್ಷದವರ ಮೇಲೆ ಹಾಕುತ್ತಾರೆ. ಬಿಜೆಪಿಯವರಿಗೆ ಹಿಂದೂ ಹತ್ಯೆ ಬೇಕಿದೆ. ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ಹತ್ಯೆ ಬೇಕಿದೆ. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಹೇಳಿದರು.












Click it and Unblock the Notifications