ಬೆಳಗಾವಿ: ರಾತ್ರೋರಾತ್ರಿ ಮನೆಯಾಗಿ ಬದಲಾಯ್ತು ಬಸ್ ನಿಲ್ದಾಣ!
Recommended Video

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳಗಾವಿ ಬಸ್ ನಿಲ್ದಾಣ ಮನೆಯಾಯ್ತು | Oneindia Kannada
ಬೆಳಗಾವಿ, ಜುಲೈ.26: ಬುಧವಾರ (ಜುಲೈ.25) ರಾತ್ರಿವರೆಗೆ ಇದ್ದ ಬಸ್ ನಿಲ್ದಾಣ ಬೆಳಗಾಗುತ್ತಿದ್ದಂತೆ ಮನೆಯಾಗಿ ಮಾರ್ಪಾಡಾಗಿದೆ. ಹೇಗೆ ಎಂದು ಹುಬ್ಬೇರಿಸಬೇಡಿ? ಯಾಕೆಂದರೆ ಇಲ್ಲಿ ಯಾವ ಜಾದೂ ಕೂಡ ನಡೆದಿಲ್ಲ.
ಬೆಳಗಾವಿ ಜಿಲ್ಲೆಯ, ಕಿತ್ತೂರು ತಾಲೂಕಿನ ಹೊಸಕಾದರವಳ್ಳಿ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಬಸ್ ನಿಲ್ದಾಣದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಬುಧವಾರ ರಾತ್ರಿವರೆಗೆ ಪ್ರಯಾಣಿಕರಿಗೆ ಕೂರಲು ಅನುಕೂಲವಾಗಿದ್ದ ಬಸ್ ನಿಲ್ದಾಣದಲ್ಲಿ, ಇಂದು ಬೆಳಗಾಗುತ್ತಿದ್ದಂತೆ ಮನೆ ನಿರ್ಮಾಣವಾಗಿದೆ.
ಬಸ್ ನಿಲ್ದಾಣಕ್ಕೆ ಗೋಡೆ ಕಟ್ಟಿ, ಎರಡು ಬಾಗಿಲು ಹಚ್ಚಿ ಬಸ್ ನಿಲ್ದಾಣವನ್ನು ಮನೆ ಮಾಡಿದ್ದಾರೆ ಕಿಡಿಗೇಡಿಗಳು. ಇದನ್ನು ಕಂಡು ಬೆಳಗ್ಗೆ ಗ್ರಾಮಸ್ಥರಿಗೂ ಅಚ್ಚರಿಯಾಗಿದೆ. ತಡ ರಾತ್ರಿಯಲ್ಲಿ ಕಿಡಿಕೇಡಿಗಳಿಂದ ಈ ಕೃತ್ಯ ನಡೆದಿದ್ದು, ಯಾರು ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಒಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ಎದ್ದಿರುವ ಈ ಮನೆಯನ್ನು ಹೊಸಕಾದರವಳ್ಳಿ ಗ್ರಾಮಸ್ಥರು ಅಚ್ಚರಿಯಿಂದ ನೋಡುತ್ತಿದ್ದಾರೆ.












Click it and Unblock the Notifications