ಬೆಳಗಾವಿಯಲ್ಲಿ ವಿನೂತನ Water public transportಗೆ ಶಾಸಕ ಅಭಯ ಪಾಟೀಲ ಪ್ಲಾನ್
ಬೆಳಗಾವಿ, ಜೂನ್ 02: ಬೆಳಗಾವಿ ನಗರದಲ್ಲಿ ಶಿಥಿಲವಾಗಿರುವ ನಾಲೆಗಳನ್ನು ವಿಸ್ತರಿಸಿ, ನಾಲೆಗಳಲ್ಲಿ ಚರಂಡಿ ನೀರು ಸೇರದಂತೆ ಪೈಪ್ ಲೈನ್ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡುವ ವಿನೂತನ ಯೋಜನೆಯನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರೂಪಿಸಿದ್ದಾರೆ. ಅತೀ ಶೀಘ್ರದಲ್ಲಿ ಬೆಳಗಾವಿ ನಗರಕ್ಕೆ ಈ "Water public transport" ಹೊಸರ ಮೆರಗು ನೀಡಲಿದೆ ಎಂದು ತಿಳಿಸಿದರು.
ಈ ಯೋಜನೆ ಕುರಿತು ಇಂದು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ ಅಭಯ ಪಾಟೀಲ ಸುದೀರ್ಘ ಚರ್ಚೆ ನಡೆಸಿದರು.
ಸುಮಾರು 3 ಕಿ.ಮೀ ವ್ಯಾಪ್ತಿ ಇರುವ "ನಗ್ಜರಿ ನಾಲಾ"ವನ್ನು ವಿಸ್ತರಿಸಿ, ಯಾವ ರೀತಿಯಲ್ಲಿ ಬೋಟ್ ಮುಖಾಂತರ water public transport (ಜಲ ಸಾರ್ವಜನಿಕ ಸಾರಿಗೆ) ಯೋಜನೆ ಕೈಗೊಳ್ಳಬಹುದು ಎಂಬುದನ್ನು ಶಾಸಕರು ಸಭೆಯಲ್ಲಿ ಮಂಡಿಸಿದರು. ಈ ಪರಿಕಲ್ಪನೆಯಿಂದ ಪ್ರವಾಸಿಗರನ್ನು ಆಕರ್ಷಿಸಲು, ರಸ್ತೆ ಸಾರಿಗೆ ಜನದಟ್ಟಣೆಯನ್ನು ನಿಯಂತ್ರಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.

ಇಡೀ ಬೆಳಗಾವಿ ನಗರ ಸೌಂದರ್ಯಕ್ಕೆ ಆದ್ಯತೆ ನೀಡುವ ಭಾಗವಾಗಿ ಈ ಯೋಜನೆ ಕೈಗೊಂಡಿದ್ದು, ರಾಜ್ಯದಲ್ಲಿ ಇದು ಪ್ರಥಮ ಪ್ರಯತ್ನ ಎನ್ನಬಹುದು ಎಂದರು. ಈ ಯೋಜನೆಯನ್ನು ಜನವಸತಿ ಪ್ರದೇಶಗಳಾದ ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋಧ್ಯಾ ನಗರ, S. V. ಕಾಲನಿ, ಶಾಂತಿ ಕಾಲನಿ, ಮರಾಠಾ ಕಾಲನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಲೇಶ್ವರ ಕಾಲನಿ, ಮಹಾದ್ವಾರ ರೋಡ ಭಾಗಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.












Click it and Unblock the Notifications