ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಪರಿಚಯ
ಬೆಳಗಾವಿ, ಮಾ. 21 : ಕರ್ನಾಟಕದಲ್ಲಿ ಲೋಕಸಭೆ ಚುಣಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಪಡೆದ ಮಹಿಳೆಯರಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ಒಬ್ಬರು. ಬಿಜೆಪಿಯ ಹಾಲಿ ಸಂಸದ ಸುರೇಶ್ ಅಂಗಡಿ ವಿರುದ್ಧ ಹೆಬ್ಬಾಳಕರ ಸ್ಪರ್ಧಿಸುತ್ತಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಮ್ಯಾ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಹೆಬ್ಬಾಳಕರ ಅವರು 16 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.
ಎಂಎ ಪದವೀಧರೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರು, ಕರ್ನಾಟಕ ಮಹಿಳಾ ಕಾಂಗ್ರಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಹೆಬ್ಬಾಳಕರ ಸಂಕ್ಷಿಪ್ತ ಪರಿಚಯ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ವಿವಿಧ ಹುದ್ದೆಗಳ ಜವಾಬ್ದಾರಿ
*ಲಕ್ಷ್ಮೀ ಹೆಬ್ಬಾಳಕರ 16 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
* ಕರ್ನಾಟಕ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
* ಸದ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಅತ್ಯುತ್ತಮ ಸಂಘಟಕಿ
*ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಲಕ್ಷ್ಮೀ ಹೆಬ್ಬಾಳಕರ ತೊಡಗಿಸಿಕೊಂಡಿದ್ದಾರೆ.
* ಯುವ ಕಾಂಗ್ರೆಸ್ ಮತ್ತು ಕೆಪಿಸಿಸಿಯ ಹಲವಾರು ಸಮಾವೇಶಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ.
*ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಕ್ರಿಯರಾಗಿ ದುಡಿದಿದ್ದಾರೆ.

ಸಮಾಜ ಸೇವಕಿ
*ಲಕ್ಷ್ಮೀ ಹೆಬ್ಬಾಳಕರ ಕೊಳಚೆ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಪರೀಕ್ಷೆ, ಏಡ್ಸ್ ಜಾಗೃತಿ ಶಿಬಿರ ಮುಂತಾದವುಗಳನ್ನು ಆಯೋಜಿಸಿದ್ದಾರೆ.
*ಅಮೆರಿಕಾಕ್ಕೆ ರಾಹುಲ್ ಗಾಂಧಿ ಕಳಿಸಿದ ಯುವತಂಡದ ಮುಖ್ಯಸ್ಥರಾಗಿದ್ದರು.

ಬಿರುಸಿನ ಪ್ರಚಾರ
*ಕ್ಷೇತ್ರದಲ್ಲಿ ಈಗಾಗಲೇ ಲಕ್ಷ್ಮೀ ಹೆಬ್ಬಾಳಕರ ಅಬ್ಬರದ ಪ್ರಚಾರ ಆರಂಭಿಸಿದರು.
* ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಅವರು, ಪ್ರಚಾರದ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಅಪಡೇಟ್ ಮಾಡುತ್ತಾರೆ. (https://www.facebook.com/laxmi.hebbalkar?fref=ts)












Click it and Unblock the Notifications